ದಾವಣಗೆರೆ: ಸೆ.18 ರಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಗರ ಉಪ ವಿಭಾಗ -2 ವ್ಯಾಪ್ತಿಯ ಗ್ರಾಹಕರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ನಗರ ಉಪ ವಿಭಾಗ 2 ರ ವ್ಯಾಪ್ತಿಗೆ ಬರುವ ಗ್ರಾಹಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು.
ವಾವಣಗೆರೆಯ ಹದಡಿ ರಸ್ತೆ, ಕೆಇಬಿ ಸರ್ಕಲ್ ಹತ್ತಿರ ಇರುವ ನಗರ ಉಪ ವಿಭಾಗ -2 ರ ಕಚೇರಿಗೆ ಹಾಜರಾಗಿ ದೂರು ಸಲ್ಲಿಸಬಹುದಾಗಿದೆ ಎಂದು ದಾವಣಗೆರೆ ಬೆಸ್ಕಾಂನ ವಾ.ಕಾ ಮತ್ತು ಪಾ ನಗರ ಉಪ ವಿಭಾಗ -2 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



