ದಾವಣಗೆರೆ: ನಮ್ಮೂರಿಗೆ ರಸ್ತೆಯಾಗುವರೆಗೂ ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿ ಬಿಂದು ಊರಿಗೆ ಡಿಸಿ ಮಹಾಂತೇಶ ಬೀಳಗಿ ದೌಡಾಯಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಗಡಿ ಗ್ರಾಮವಾದ ಎಚ್. ರಾಂಪುರಕ್ಕೆ ಗ್ರಾಮಕ್ಕೆ ಇಂದು ಭೇಟಿ ನೀಡಿದ ಡಿಸಿ, ನಡುರಸ್ತೆಯಲ್ಲಿ ತಮ್ಮ ಕಾರು ನಿಲ್ಲಿಸಿ ನಡೆದುಕೊಂಡು ಗ್ರಾಮಕ್ಕೆ ತಲುಪಿದ್ದಾರೆ. ನಂತರ ಯುವತಿ ಜತೆ ಮಾತನಾಡಿ ಗ್ರಾಮದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ನಿಮ್ಮೂರಿಗೆ ರಸ್ತೆ, ಬಸ್ ವ್ಯವಸ್ಥೆ ಮಾಡಿಸುತ್ತೇವೆ.ಗೆ ನಿನಗೆ ಮದ್ವೆ ಕೂಡಾ ಮಾಡಿಸುತ್ತೇನೆ. ಒಳ್ಳೆ ಗಂಡು ಹುಡುಕಿ ಮದ್ವೆ ಮಾಡಿಸುವೆ ಎಂದು ಬಿಂದುಗೆ ಮಹಾಂತೇಶ ಬೀಳಗಿ ಭರವಸೆ ನೀಡಿದರು. ನಾಳೆಯಿಂದಲೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಂದು, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಕಾರ್ಯ ನಿರ್ವಹಿಸುದ್ಧಾರೆ.
ಯುವತಿ ಬಿಂದು ನಮ್ಮೂರಿಗೆ ಸರಿಯಾದ ರಸ್ತೆ, ಬಸ್ ಇಲ್ಲ. ಭಯಾನಕ ಕಾಡು ಬೇರೆ, ರಾತ್ರಿಯಾದ್ರೆ ಓಡಾಡದು ತುಂಬಾ ಕಷ್ಟ. ಹೀಗಾಗಿ ನಮ್ಮೂರಿಗೆ ಕನ್ಯೆ ನೋಡಲು ಬಂದವರು ರಸ್ತೆ ನೋಡಿ ರಿಜೆಕ್ಟ್ ಮಾಡ್ತಿದ್ಧಾರೆ. ಹೀಗಾಗಿ ನಮ್ಮೂರಿಗೆ ರಸ್ತೆ ಆಗುವರೆಗೂ ನಾನು ಮದ್ವೆ ಆಗಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರ ಮುಖ್ಯ ಕಾರ್ಯದರ್ಶಿ ಗಮನಕ್ಕೆ ಬಂದಿತ್ತು. ಇದೀಗ ಡಿಸಿ ಮಹಾಂತೇಶ ಬೀಳಗಿ ದೌಡಾಯಿಸಿದ್ದು, ಗ್ರಾಮದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.



