ದಾವಣಗೆರೆ: ಜಲಸಿರಿ ಯೋಜನೆಯ ಗುತ್ತಿಗೆ ಪಡೆದಿರುವ ಸುಯೇಜ್ ಕಂಪನಿಯ ವತಿಯಿಂದ ನಗರದ ನಿಟ್ಟುವಳ್ಳಿ ಉದ್ಯಾನವನದಲ್ಲಿ ಅಭಿಯಂತರರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೆ.ಯು.ಐ.ಡಿ.ಎಫ್.ಸಿ ದಾವಣಗೆರೆ ಕಾರ್ಯಪಾಲಕ ಅಭಿಯಂತರರಾದ ಕೆ. ಮಂಜುನಾಥ್ ಉದ್ಘಾಟಿಸಿದರು. “ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ನೆನಪಿಗಾಗಿ ಭಾರತದಲ್ಲಿ ಅಭಿಯಂತರರು ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಇಂಜನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರು ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಗಳನ್ನು ಆದ್ಯತೆಯಿಂದ ಪರಿಗಣಿಸಿದರೆ ಇಂಜಿನಿಯರಿಂಗ್ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಣಜಿ ನಾಗರಾಜ ಮಾತನಾಡಿ, ಕಿರಿಯ ಅಭಿಯಂತರರು ತಾಂತ್ರಿಕ ನೈಪುಣ್ಯತೆಯನ್ನುರೂಢಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ರವಿ ಟಿ.ಸಿ. ಮಾತನಾಡಿ, “ ಸರ್.ಎಂ. ವಿಶ್ವೇಶ್ವರಯ್ಯನವರ ಬದಕು, ಸಾಧನೆ ಹಾಗೂ ಅವರು ಪ್ರಾಮಾಣಿಕತೆಯ ವಿಷಯಗಳನ್ನು ಮೆಲಕು ಹಾಕಿದರು.
ಸುಯೇಜ್ ಕಂಪನಿಯ ಕರ್ಯಕ್ರಮ ವ್ಯವಸ್ಥಾಪಕ ಸಚಿತ್ ಮಾತನಾಡಿ, “ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸುಯೇಜ್ ಕಂಪನಿಯಲ್ಲಿ ನೀಡಲಾಗುತ್ತಿರುವ ಕೌಶಲ್ಯ ಉನ್ನತಿ ಹಾಗೂ ತಾಂತ್ರಿಕ ತರಬೇತಿಗಳ ವಿವರಗಳನ್ನು ಪಟ್ಟಿ ಮಾಡಿ ಈ ದೇಶದ ಅಭಿವೃದ್ದಿಯಲ್ಲಿ ಅಭಿಯಂತರರು ಸೇವೆಗಳ ಅವಶ್ಯಕತೆಯನ್ನು ವಿವರಿಸಿದರು”
ಕರ್ಯಕ್ರಮದಲ್ಲಿ ಸುಯೇಜ್ ಕಂಪನಿಯ ವ್ಯವಸ್ಥಾಪಕರ ದಾಸ್, ಪ್ರಶಾಂತ್, ಸತ್ಯಚಂದ್ರ ಹಾಗೂ ನಿಖಿಲ್ ವಾಘ್ ರವರು ಭಾಗವಹಿಸಿದ್ದರು. ಕರ್ಯಕ್ರಮದ ನಿರೂಪಣೆಯನ್ನು ವಿ.ಕೆ.ನರಸಿಂಹಮೂರ್ತಿ ನೇರವೇರಿಸಿದರೆ, ಸುಯೇಜ್ ಕಂಪನಿಯ ಆಡಳಿತಾಧಿಕಾರಿ ರೇಖಾರವರು ಸ್ವಾಗತಿಸಿದರು. ಕಂಪನಿಯ ಲೆಕ್ಕಾಧಿಕಾರಿ ರವಿಚಂದ್ರ, ಸುರಕ್ಷತೆ ವಿಭಾಗದ ಅಧಿಕಾರಿ ಸಂದೀಪ ನಾಯಕ್, ಸಹಾಯಕ ವ್ಯವಸ್ಥಾಕರಾದ ಸೋಮಶೇಖರ, ವಿದ್ಯಾದರ, ಅರುಣ್, ರಾಜೇಶ್ ಹಾಗೂ ರವಿಕಿರಣ ಉಪಸ್ತಿತರಿದ್ದರು. ಕರ್ಯಕ್ರಮದಲ್ಲಿ ಸುಮಾರು ೧೧೦ ಹೆಚ್ಚು ಅಭಿಯಂತರರು ಭಾಗವಹಿಸಿದ್ದರು.



