ಡಿವಿಜಿ ಸುದ್ದಿ, ದಾವಣಗೆರೆ: ಕೆರೆ, ಬಾವಿ, ರಸ್ತೆ, ಅನ್ನ ಛತ್ರ ಮುಂತಾದ ಲೋಕೋಪಯೋಗಿ ಕೆಲಸ ಮಾಡುತ್ತ ಅಹಂಕಾರ ಬೆಳೆಸಿಕೊಂಡು ಕಾಯಕ ಯೋಗಿಯಾಗಿದ್ದ ಸಿದ್ಧರಾಮರಿಗೆ ಅಂತರಂಗದ ಅರಿವಿನ ಕಣ್ಣುತೆರೆಸಿ ಶಿವಯೊಗಿಯನ್ನಾಗಿ ಪರಿವರ್ತಿಸಿದವರು ಅಲ್ಲಮ ಪ್ರಭುಗಳೆಂದು ಹೂವಿನಮಡು ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ಎ, ಸಿ, ಶಶಿಕಲಾ ಶಂಕರ ಮೂರ್ತಿ ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆಯ ಪಿ,ಜೆ ಬಡಾವಣೆಯಲ್ಲಿರುವ ಈಶ್ವರಮ್ಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದಲ್ಲಿ ಭಾಗವಹಿಸಿ ಅವರು” ಶಿವಯೋಗಿ ಸಿದ್ಧರಾಮೇಶ್ವರರ ಕಾಯಕ ತತ್ವ ವಿಷಯ ಕುರಿತು” ಮಾತನಾಡಿದರು.
ತನುವಿನಲ್ಲಿಯೇ ಸ್ಥಿರವಾದ ಕೆರೆಯನ್ನು ಕಟ್ಟಿ ಅದರಲ್ಲಿ ಪರಮಾನಂದದ ಜಲವನ್ನು ತುಂಬಿ ಆನಂದದ ಅರವಟ್ಟಿಗೆಯನ್ನಿರಿಸಿ, ಆನಂದದ ಅಮೃತವನ್ನು ಒಮ್ಮೆ ಪಾನ ಮಾಡಿದವರು ಮತ್ತೆ ಹಸಿಯದಂತೆ, ಮಾಡುವುದರಲ್ಲಿಯೇ ಶ್ರೇಷ್ಠತೆ ಇದೆ ಎಂದು ತಿಳಿಸಿ ಲೋಕ ಕಲ್ಯಾಣದ ಜೊತೆಗೆ ಆತ್ಮಕಲ್ಯಾಣದ ಮಾರ್ಗತೋರಿಸಿದರೆಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಅವರು ಮಾದಾರ ಚನ್ನಯ್ಯನಲ್ಲಿದ್ದ ಶಿವ ಭಕ್ತಿಯನ್ನು ಮಾರ್ಮಿಕವಾಗಿ ತಿಳಿಸಿದರು. ಮುಖ್ಯೋಪಾಧ್ಯಾಯ ಕೆ, ಎಸ್, ಪ್ರಭುಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ, ಕೆ ,ಕಬ್ಬೂರು, ಸದಸ್ಯ ವಿಶ್ವನಾಥ್ ಬೊಂಗಾಳೆ ವೇದಿಕೆಯಲ್ಲಿದ್ದರು. ಶಿಕ್ಷಕಿಯರಾದ ಶ್ವೇತಾ, ರೋಹಿಣ , ಆಶಾಲತಾ, ರಂಜಿನಿ, ಹೇಮಲತಾ ಇತರರು ಹಾಜರಿದ್ದರು,
ವರುಣ್ ವಚನ ಪ್ರಾರ್ಥನೆ ಮಾಡಿದರು, ಶ್ರೀದೇವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ,ಕೆ, ಮಹೇಶ್ ಕಬ್ಬೂರು ವಂದಿಸಿದರು,



