ಡಿವಿಜಿ ಸುದ್ದಿ, ಹರಪನಹಳ್ಳಿ: 19 ವರ್ಷಗಳ ಕಾಲ ಸೈನ್ಯದಲ್ಲಿ ಸಾರ್ಥಕ ಸೇವೆಯಲ್ಲಿಸಿ ನಿವೃತ್ತಿ ಪಡೆದ ತಾಲೂಕಿನ ದುಗ್ಗಾವತ್ತಿ ಗ್ರಾಮದ ಹಲುವಾಗಲು ತಿಮ್ಮಪ್ಪ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಗ್ರಾಮದಲ್ಲಿ ಬೆಳಿಗ್ಗೆ 11 ಗಂಟೆಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದ್ದ ತೆರದ ವಾಹನದಲ್ಲಿ ಯೋಧ ಹಲುವಾಗಲು ತಿಮ್ಮಪ್ಪ ಅವರನ್ನು ಡೋಲು, ಡ್ರಮ್ ಸೇಟ್ ಸೇರಿದಂತೆ ವಿವಿಧ ವಾದ್ಯಗಳ ಮೂಲಕ ಗ್ರಾಮದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ನಡೆಸಲಾಯಿತು. ಸೌಟ್ಸ್ ಅಂಡ್ ಗೈಡ್ , ಎನ್ ಎಸ್ ಎನ್ ಮತ್ತು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ರಸ್ತೆ ಸೇರಿದಂತೆ ಇಕ್ಕೆಲಗಳಲ್ಲಿ ನಿಂತು ಜನರು ಭಾರತೀಯ ಸೇನೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮನೆಗೆ ಮರಳಿದ ಯೋಧನೆಗೆ ಸೆಲ್ಯೂಟ್ ಮಾಡಿದರು. ಗ್ರಾಮದಲ್ಲಿ ಒಂದು ರೀತಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಡೆ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಗೀತೆ ಮೊಳಗಿತು.

ಸಮಾರಂಭದ ಸಾನಿಧ್ಯವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ದೇಶ ಕಾಯುವ ವೀರ ಯೋಧರು ಅತ್ಯವಶ್ಯಕ. ರೈತ, ಸೈನಿಕ, ಗುರು ಮೂರು ಕಣ್ಣುಗಳನ್ನು ಗೌರವಿಸಬೇಕು. ಮಕ್ಕಳು ಸೈನ್ಯಕ್ಕೆ ಸೇರುವ ಸಂಕಲ್ಪ ಮಾಡಬೇಕು. ದೇಶದ ತ್ರಿವರ್ಣ ಧ್ವಜ ಎತ್ತರಕ್ಕೆ ಹಾರುವುದು ಗಾಳಿ ಯಿಂದಲ್ಲ, ಸೈನಿಕರ ಉಸಿರಿನಿಂದ ಎಂಬುದನ್ನು ಯಾರು ಮರೆಯಬಾರದು. ದೇಶದಲ್ಲಿ ಕ್ರಿಕೆಟ್, ಸಿನಿಮಾ ತಾರೆಯರು ಮಾದರಿ ಅಲ್ಲ, ಸೈನಿಕರು ಮಾದರಿಯಾಗಬೇಕು ಎಂದು ಹೇಳಿದರು.
ರಾಜ್ಯ ಅಹಿಂದ ಘಟಕ ಉಪಾಧ್ಯಕ್ಷ ಶಂಕರನಹಳ್ಳಿ ಉಮೇಶಬಾಬು ಮಾತನಾಡಿ, ಹರಪನಹಳ್ಳಿ ಮಕ್ಕಳು ಉನ್ನತ ಹುದ್ದೆ ಪಡೆಯಲಿ. ನಿವೃತ್ತಿ ಸೈನಿಕರು ಗಟ್ಟಿಯಾಗಿರುತ್ತಾರೆ. ಅವರಿಗೆ ಕೆಲಸ ಕೊಡಬೇಕು. ಪ್ರತಿಯೊಂದು ಪಂಅಚಯ್ತಿ ಮಟ್ಟದಲ್ಲಿ ಸಿವಿಲ್ ಸೈನಿಕ ಪಡೆದ ಕಟ್ಟಿ ಸೈನಿಕರನ್ನು ತಯಾರು ಮಾಡಬೇಕು ಎಂಬ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹೆಚ್. ಬಿ.ಪರುಶುರಾಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ದುಗ್ಗಾವತ್ತಿ ಹಿರೇಮಠದ ವೀರಭದ್ರ ಸ್ವಾಮೀಜಿ, ಕಾಂಗ್ರಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಲೇಶ್, ಅರುಣ ಪೂಜಾರ್, ಎಸ್.ಜಾಕೀರ ಸರ್ಖಾವಾಸ್, ತೆಲಿಗಿ ಯೋಗೀಶ್, ನೀಲಗುಂದ ತಿಮ್ಮೇಶ್, ದುಗ್ಗಾವತ್ತಿ ಮಂಜುನಾಥ, ಶಿಕ್ಷಕ ಹುಸೇನಪೀರ್, ಯೋಧನ ತಾಯಿ ರೇವಕ್ಕ, ಕೆ.ನಿಂಗಪ್ಪ, ಎಂ.ಬಸವರಾಜಯ್ಯ, ಎಂ.ಪಾರ್ವತಿ, ನವಲಿ ಬಸವರಾಜಪ್ಪ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.



