ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆಯ ಸಿದ್ದವೀರಪ್ಪ ಬಡವಾಣೆ 42 ನೇ ವಾರ್ಡ್ ನ ಭಾರತೀಯ ಜನತಾ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಪ್ರೀತಿ ರವಿಕುಮಾರ್ ಅವರು ಸ್ಪರ್ಧಿಸಿದ್ದು ಅವರಿಗೆ 42 ನೇ ವಾರ್ರ್ಡ್ ಬೂತ್ ಮಟ್ಟದ ಅಧ್ಯಕ್ಷರುಗಳು ಮತ್ತು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಂದು ಮಾಜಿ ಶಾಸಕ ಟಿ. ಗುರುಸಿದ್ದಾನ ಗೌಡ್ರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೀತಿ ರವಿಕುಮಾರ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಬಂಡಾಯ ಆಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿರುತ್ತಾರೆ. ಹಾಗಾಗಿ 42 ನೇ ವಾರ್ಡ್ ಅಧ್ಯಕ್ಷ ಶಿವಾಜಿರಾವ್ ಜೊಳ್ಳೆ ಇವರ ನೇತೃತ್ವದಲ್ಲಿ ವಾರ್ಡ್ ಬೂತ್ ಮಟ್ಟದ ಅಧ್ಯಕ್ಷರುಗಳು ಆದ ಕೊಟ್ಟೂರು ಗೌಡ್ರ, ವೇಮಣ್ಣ, ದಿನೇಶ್ ಕುಮಾರ್, ಸಿದ್ದಣ್ಣ, ಬಣಕಾರ, ಪಾರ್ವತಿ ಕೆ. ಪಾಟೀಲ್ ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಬಂಡಾಯ ಆಭ್ಯರ್ಥಿಯಾದ ಪ್ರೀತಿ ರವಿಕುಮಾರ ಇವರಿಗೆ ಬೆಂಬಲ ನೀಡಿದ್ದಾರೆ.
ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತೆಯಾಗಿರುವ ಪಾರ್ವತಿ ಕೆ. ಪಾಟೀಲ್ ಇವರು ಕೂಡಾ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಕಾರಣ ಇವರು ಕೂಡಾ ಬಿಜೆಪಿ ಪಕ್ಷದ ಬಂಡಾಯ ಆಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಮತದಾರರು ಪ್ರೀತಿ ರವಿಕುಮಾರ ಅವರಿಗೆ ಮತನೀಡಿ ಗೆಲ್ಲಿಸಬೇಕೆಂದು ಹೇಳಿದರು.
ಆಭ್ಯರ್ಥಿ ಪ್ರೀತಿ ರವಿಕುಮಾರ ಮಾತನಾಡಿ ಸಿದ್ದವೀರಪ್ಪ ಬಡಾವಣೆಯಲ್ಲಿ ಒಳಚರಂಡಿ ಸೇರಿದಂತೆ ಆನೇಕ ಸಮಸ್ಯೆಗಳು ಇವೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ ಎಂದು ಭರವಸೆ ನೀಡಿದರು.
ಟಿಕೆಟ್ ವಂಚಿತ ಪಾರ್ವತಿ ಕೆ. ಪಾಟೀಲ್ ಮಾತನಾಡಿ, ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತೆಯಾಗಿದ್ದು ನನ್ನನ್ನು ಗುರುತಿಸಿ ಟಿಕೆಟ್ ನೀಡದೆ ಯಾರೋ ಗೋತ್ತಿಲ್ಲದವರಿಗೆ ಟಿಕೆಟ್ ನೀಡಲಾಗಿದೆ. ಇದು ಬೇಸರ ಮೂಡಿಸಿದೆ. ಹೀಗಾಗಿ ನಾನು ಬಿಜೆಪಿ ಬಂಡಾಯ ಆಭ್ಯರ್ಥಿ ಪ್ರೀತಿ ರವಿಕುಮಾರ ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಶಿವಾಜಿರಾವ್ ಜೊಳ್ಳೆ, ವೇಮಣ್ಣ, ನಂದೀಶ್ ಕುಮಾರ್, ಸಿದ್ದಪ್ಪ, ಬಣಕಾರ, ಪಾರ್ವತಿ ಕೆ. ಪಾಟೀಲ್ ಇದ್ದರು.