Connect with us

Dvgsuddi Kannada | online news portal | Kannada news online

ಕನ್ನಡದ ವರನಟ ಡಾ ರಾಜಕುಮಾರ್ ಜೊತೆ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದ ಬ್ಯಾಂಕ್ ನೌಕರ ಶಾಂತಗಂಗಾಧರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಚನ್ನಗಿರಿ

ಕನ್ನಡದ ವರನಟ ಡಾ ರಾಜಕುಮಾರ್ ಜೊತೆ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದ ಬ್ಯಾಂಕ್ ನೌಕರ ಶಾಂತಗಂಗಾಧರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

-ಕೋಗಲೂರು ಕುಮಾರ್

ಚನ್ನಗಿರಿ ತಾಲ್ಲೂಕಿನ ಕೋಗಲೂರು ಸಮೀಪವಿರುವ ನವೀಲೆಹಾಳ್ ಗ್ರಾಮದ  ಎಸ್ ಟಿ ಶಾಂತ ಗಂಗಾಧರ ಅವರು 2019 ನೇ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ‌.1980 – 81 ರಲ್ಲಿ ಕನ್ನಡದ ಮೇರುನಟ ಡಾಕ್ಟರ್ ರಾಜಕುಮಾರ ಜೊತೆ ಸೇರಿಕೊಂಡು ಗೋಕಾಕ್ ಚಳವಳಿಯಲ್ಲಿ ಎಸ್.ಟಿ ಗಂಗಾಧರ ರವರು ಭಾಗವಹಿಸಿ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ಗಂಗಾಧರ ಅವರು ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ದಾವಣಗೆರೆ ಜಿಲ್ಲೆಯಲ್ಲಿ ಸಂತಸದ ಮನೆಮಾಡಿದೆ. ಇವರು ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ಜನಿಸಿದ ಎಸ್.ಟಿ. ಗಂಗಾಧರ ಅವರು ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಸ್ವ ಗ್ರಾಮದಲ್ಲಿ ಓದಿದರು. ನಂತರ ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಗ್ರಾಮದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ, ಪಿಯು ಶಿಕ್ಷಣವನ್ನು ಶಿವಮೊಗ್ಗ  ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ ನಂತರ ಸಿರಿಗೆರೆಗೆ ಮರಳಿ ಪದವಿ ಶಿಕ್ಷಣವನ್ನು ಪಡೆದರು. ಮೈಸೂರಿನಲ್ಲಿ ವಿವಿಯಲ್ಲಿ ಎಂ.ಎ ಪದವಿಯನ್ನು ಅಗ್ರಸ್ಥಾನದೊಂದಿಗೆ ಪಡೆದರು. ನಂತರ 1979 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಸಿಂಡಿಕೇಟ್ ಬ್ಯಾಂಕ್ ನೌಕರರಾಗಿ ಸೇರುಕೊಂಡರು.

ಹಿರಿಯ ಸಾಹಿತಿಗಳಾದ ಕೆ.ಎಸ್. ನಿಸಾರ್ ಅಹಮದ್ ರವರ ನೇತೃತ್ವದಲ್ಲಿ ಬಳ್ಳಿಗಾವಿ ಉತ್ಸವ ನಡೆಯುವುದಕ್ಕೆ ಕಾರಣ ಬಳ್ಳಿಗಾವಿಯ ಪ್ರೇರಣೆ ಎನ್ನುತ್ತಾರೆ ಶಾಂತಗಂಗಾಧರ ರವರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಸ್ನೇಹರಂಗ ಕಲಾ ತಂಡದಲ್ಲಿ ಪಾತ್ರ ನಿರ್ವಹಿಸಿ ರಾಜ್ಯಮಟ್ಟದ ಪೋಷಕ ನಟ ಪ್ರಶಸ್ತಿಗೆ ಆಯ್ಕೆಯಾದರು. ದೂರದರ್ಶನದ ಚಂದನ ವಾಹಿನಿಯಲ್ಲಿ 82 ಎಪಿಸೋಡ್ ಪ್ರಸಾರಗೊಂಡ “ಏಸೂರು ಕೊಟ್ಟರು, ಈಸೂರು ಕೊಡೆವು”, ಎಂಬ ಧಾರಾವಾಹಿಯಲ್ಲಿ ಸ್ವತಂತ್ರ ಹೋರಾಟಗಾರ ಹಿರೇಮಠ ಪಾತ್ರವಹಿಸಿ ಬಹುಮುಖ್ಯ ಪ್ರತಿಭೆಗೆ ಪಾತ್ರರಾಗಿರುತ್ತಾರೆ.

ಶಿಕಾರಿಪುರ ತಾಲೂಕು ಸಾಹಿತ್ಯ ಪರಿಷತ್ತಿನಲ್ಲಿ ಹತ್ತು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಂಟು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ‘ಗ್ರಾಮೀಣ ಗುರಿ’ ಪ್ರಶಸ್ತಿಯನ್ನು ಆರಂಭಿಸಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

ದೀಪಾವಳಿ ವಿಶೇಷ ಸಂಚಿಕೆಗಳಲ್ಲಿ “ನಲ್ಲಿ ಸೂತಕ ಕಥೆ ” ವಿ ಗಾಟ್ ಇಟ್ ”  ಮರೆಯಲಾಗದ ಬದುಕು ” ಕಥೆಗಳಿಗೆ 1990 ರಲ್ಲಿ ಪ್ರಥಮ ಬಹುಮಾನ ಪಡೆಯುತ್ತಾರೆ , ” ಸಂಗಮ ಮುಳುಗುತಿದೆ ‘ ಎಂಬ ಸಂಕಲನಕ್ಕೆ ಸಂಕ್ರಮಣ ಕಾವ್ಯ ಪ್ರಶಸ್ತಿ , ಗುಜಾರಾತ್ ಭೂಕಂಪ ಕುರಿತು ಬರೆದ ‘ ಜನ ಗಣ ಮನ ‘ ಕಾವ್ಯಕ್ಕೆ ಲಂಕೇಶ ಪ್ರತಿಷ್ಠಾನದಿಂದ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.

ಆಕಾಶವಾಣಿ ಭದ್ರಾವತಿಯಲ್ಲಿ ರಶ್ಮಿ ಕಾರ್ಯಕ್ರಮಕ್ಕೆ ” ಆಕಾಶವಾಣಿ ಧೀರ ಧಿಗಂಬರ ” ಅಕ್ಕ ಕಳ್ಳನಾದರೂ ಸ್ವಾತಂತ್ರ್ಯ ಹೋರಾಟ ಮಾಡಿದ ಶನೇಶ್ವರ , ರಾಮ ಹೀಗೆ ಹಲಾವಾರು ರೂಪಕಗಳನ್ನು ರಚಿಸಿದ್ದಾರೆ. ಶಾಂತ ಗಂಗಾಧರ ರವರು 1964 ರಲ್ಲಿ ಕನ್ನಡಪ್ರಭ ಅಯೋಜಿಸಿದ್ದ ವಿದ್ಯಾರ್ಥಿ ವಿಭಾಗದ ಮಟ್ಟದಲ್ಲಿ ” ನಾನು ಭಗತ್ ಸಿಂಗ್ ಆಗಿದ್ದರೆ ಎಂಬ ವಿಷಯವನ್ನು ಮೆಲುಕು ಹಾಕಿದರು. 2012 ರಲ್ಲಿ ಬ್ಯಾಂಕ್ ವೃತ್ತಿಯಿಂದ ನಿವೃತ್ತಿ ಹೊಂದಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top