ದಾವಣಗೆರೆ: ಆರೋಗ್ಯ ಸಚಿವರ ವೈಫಲ್ಯವನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಅವರ ವರ್ತನೆಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತೊಮ್ಮೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಹೆಸರು ಹೇಳದೇ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಕಾಲದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಇಳಿ ವಯಸ್ಸಿನಲ್ಲಿ ಕೆಲ ಮಾಡುತ್ತಿದ್ಧಾರೆ. ಆದರೆ, ಆರೋಗ್ಯ ಸಚಿವರಿಗೆ ಏನು ಆಗಿದೆ. ನಿಮ್ಮ ವರ್ತನೆಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗುತ್ತದೆ. ಕೂಡಲೇ ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ ಎಂದರು.
ಆರೋಗ್ಯ ಸಚಿವರ ರಾಜೀನಾಮೆ ಬಗ್ಗೆ ನಾನು ಮಾತನಾಡಕ್ಕೆ ಹೋಗುವುದಿಲ್ಲ. ಈ ಬಗ್ಗೆ ಯಾರ ಗಮನಕ್ಕೆ ತರಬೇಕೋ ತಂದಿದ್ದೇವೆ. ಅವರು ತಮ್ಮ ವರ್ತನೆ ಬದಲಿಸಿಕೊಂಡು ತಮ್ಮ ಕೆಲಸದಲ್ಲಿ ತಾವು ತೊಡಗಿಸಿಕೊಳ್ಳಬೇಕು ಎಂದರು.



