ದಾವಣಗೆರೆ: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಇಂದು ಸಂಜೆನಗರದ ಹೆಗಡೆ ಡಯಾಗ್ನಸ್ಟಿಕ್ ಸೆಂಟರ್ ಗೆ ನೀಡಿ ಸಿಟಿ ಸ್ಕ್ಯಾನ್ ಬಗ್ಗೆ ಪರಿಶೀಲನೆ ನಡೆಸಿದರು.

ರೋಗಿಗಳು ಮತ್ತವರ ಸಂಬಂಧಿಕರೊಂದಿಗೆ ಮಾತನಾಡಿ ನಿಗದಿತ ದರ ಪಡೆಯುತ್ತಿರುವ ಬಗ್ಗೆ ವಿಚಾರಿಸಿದರು. ಹಾಗೂ ಅಲ್ಲಿನ ಮುಖ್ಯಸ್ಥರು ಮತ್ತು ವೈದ್ಯರಿಗೆ ಸರ್ಕಾರ ನಿಗದಿಪಡೆಸಿದಕ್ಕಿಂತ ಹೆಚ್ಚಿನ ದರ ಪಡೆಯಬಾರದೆಂದು ಸೂಚನೆ ನೀಡಿದರು. ದರ ವಿವರದ ಬೋರ್ಡನ್ನು ವೀಕ್ಷಿಸಿದರು. ಹಾಗೂ ಪ್ರತಿ ಸ್ಕ್ಯಾನ್ ಆದ ನಂತರ ಸ್ಯಾನಿಟೈಸ್ ಮಾಡಿ ಮುಂದಿನ ಪರೀಕ್ಷೆ ನಡೆಸುವಂತೆ ತಾಕೀತು ಮಾಡಿ ಖುದ್ದು ಪರಿಶೀಲಿಸಿದರು.



