ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ನಾನು ಎಲ್ಲ ಕಡೆ ಓಡಾಡಿದ್ದೇನೆ. ನನಗೂ ವಯಸ್ಸು ಆಯ್ತು, ಡಯಾಬೆಟಿಸ್ ಬೇರೆ ಇದೆ. ನನ್ನ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಓಡಾಟಕ್ಕೆ ಆಗಿಲ್ಲ. ಆದ್ರೂ ಕೊರೊನಾ ನಿಯಂತ್ರಿಸಲು ಇತಿ, ಮಿತಿಯಲ್ಲಿ ಎಲ್ಲ ಕಡೆ ಓಡಾಡಿದ್ದೇನೆ. ಈ ವಿಚಾರದಲ್ಲಿ ನಾನು, ಶಾಮನೂರು ಶಿವಶಂಕರಪ್ಪ, ರವೀಂದ್ರನಾಥ್ ಒಂದೇ ಕುಲಕ್ಕೆ ಸೇರಿದವರು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಕ್ಕೆ ಸಾಧ್ಯವಾದಷ್ಟು ಎಲ್ಲ ಕೆಲಸ ಮಾಡಿದ್ದೇನೆ. ನನಗೂ ವಯಸ್ಸು ಆಯ್ತು, ಡಯಾಬೆಟಿಸ್ ಕೂಡ ಇದೆ. ಆರೋಗ್ಯ ದೃಷ್ಟಿಯಿಂದ ಮಿತಿಯಲ್ಲಿ ಓಡಾಟ ಮಾಡಿದ್ದೇನೆ. ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಕೊರೊನಾ ನಿಯಂತ್ರಿಸಲು ಓಡಾಟ ಮಾಡಿದ್ಧಾರೆ. ಶಾಸಕರಾದ ರೇಣುಕಾಚಾರ್ಯ, ವಿರೂಪಾಕ್ಷಪ್ಪ, ಲಿಂಗಣ್ಣ, ರಾಮಚಂದ್ರ ಸೇರಿದಂತೆ ಎಲ್ಲರೂ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ನಾನು, ರವೀಂದ್ರ ನಾಥ್, ಶಾಮನೂರು ಶಿವಶಂಕರಪ್ಪ ಒಂದೇ ಕುಲದವರು. ಮೂವರಿಗೂ ವಯಸ್ಸು ಆಯ್ತು. ಆರೋಗ್ಯ ದೃಷ್ಟಿಯಿಂದ ಇತಿಮಿತಿಯಲ್ಲಿ ಓಡಾಡಿದ್ಧೇವೆ ಎಂದು ತಿಳಿಸಿದರು.



