ಜಗಳೂರು: ಆರು ಬೈಕ್ ಕಳ್ಳತನ ಮಾಡಿದ ಬೈಕ್ ಮೆಕ್ಯಾನಿಕ್ ನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 1.50 ಲಕ್ಷದ ಆರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಗಳೂರು ತಾಲ್ಲೂಕಿನ ಹಿರೇಅರೇಕೆರೆಯ ಉಮಾಪತಿ ಕೆ.ಟಿ ಎಂಬುವರು ಜಗಳೂರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಗೊಲ್ಲರಹಟ್ಟಿಯ ಬೈಕ್ ಮೆಕಾನಿಕ್ ಮಂಜುನಾಥ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಬಂಧಿಸಿ ವಿಚಾರಣೆ ಮಾಡಿದಾಗ ಒಟ್ಟು 06 ಬೈಕುಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಇವುಗಳ ಬೆಲೆ ಅಂದಾಜು 1,50000/-ರೂಗಳಾಗಿದೆ. ಆರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಗಳೂರು ಪೊಲೀಸ್ ಠಾಣೆ ಪಿ.ಎಸ್.ಐ ಸಂತೋಷ್ ಬಾಗೋಜಿ, ಎ.ಎಸ್.ಐ ನಾಗರಾಜ ಆರ್, ಚಂದ್ರಶೇಖರ್ ಸಿ.ಎನ್ ಹಾಗೂ ಠಾಣಾ ಸಿಬ್ಬಂದಿಗಳಾದ ನಾಗಭೂಷಣ, ಪ್ರವೀಣ ಪಾಟೀಲ್, ನಾಗರಾಜ ಹೆಚ್, ಹನುಮಂತಪ್ಪ ಕವಾಡಿ, ಮಾರುತಿ, ಬಸವರಾಜ,ಎಂ, ಮಂಜುನಾಥ ಹೆಚ್ ಹಾಗು ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರು ಪತ್ತೆ ಮಾಡಿದ ತಂಡಕ್ಕೆ ಶ್ಲಾಘಿಸಿದ್ದಾರೆ.