ದಾವಣಗೆರೆ: ಜಿಲ್ಲೆಯಲ್ಲಿಂದು 196 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 25,652ಕ್ಕೆ ಏರಿಕೆಯಾಗಿದೆ. ಇಂದು182 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 23,743 ಮಂದಿ ಗುಣಮುಖರಾಗಿದ್ಧಾರೆ. ಜಿಲ್ಲೆಯಲ್ಲಿ ಇದುವರೆಗೆ 271 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 1638 ಸಕ್ರಿಯ ಕೇಸ್ ಗಳಿವೆ. ದಾವಣಗೆರೆ 114, ಹರಿಹರ 24, ಜಗಳೂರು 11, ಚನ್ನಗಿರಿ 15, ಹೊನ್ನಾಳಿ 28, ಹೊರ ಜಿಲ್ಲೆಯಿಂದ 04 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.



