ಡಿವಿಜಿ ಸುದ್ದಿ, ದಾವಣಗೆರೆ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ ಸಿ ಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿರೋಧಿಸಿವಿದ್ದು, ಅ. 31 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಆಸಿಯನ್ 15 ದೇಶದೊಂದಿಗೆ ಸೇರಿ ಆರ್ ಸಿ ಇಪಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾದಿದೆ. ನವೆಂಬರ್ 4 ರಂದು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಕಲಿದೆ. ಈ ಒಪ್ಪಂದ ದೇಶದ ರೈತರ ವಿರೋಧಿಯಾಗಿದ್ದು, ಈ ಒಪ್ಪಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಡನೆಗೆ ಕರೆ ನೀಡಿದ್ದೇವೆ.
ನೂತನ ಒಪ್ಪಂದಿಂದ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಶುಲ್ಕವನ್ನು ಶಾಶ್ವತವಾಗಿ ಶೂನ್ಯಕ್ಕೆ ಇಳಿಯಲಿದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನಮ್ಮ ದೇಶಗಳಲ್ಲಿ ಮಾರಾಟ ಮಾಡಲು ಹೇಳುತ್ತವೆ. ಇದರಿಂದ ನಮ್ಮ ದೇಶದ ಕೋಟ್ಯಾಂತರ ಸಣ್ಣ ರೈತರಿಗೆ ಅನ್ಯಾಯವಾಗಲಿದೆ ಎಂದರು.
ಮಹಿಳೆಯರು ಜೀವನೋಪಾಯಕ್ಕಾಗಿ ಮಾಡುತ್ತಿರುವ ಹೈನುಗಾರಿಕೆ ಕ್ಷೇತ್ರಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಲಿದೆ. ರೇಷ್ಮೆ, ಅಡಕೆ, ತೋಟಗಾರಿಕೆ ಬೆಳೆಗಳು ಸಹ ನಷ್ಟಕ್ಕೊಳಗಾಗುತ್ತದೆ. ಈ ಒಪ್ಪಂದ ವಿದೇಶಿ ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಲು ಅನುಕೂಲವಾಗುತ್ತದೆ. ಸೂಪರ್ ಮಾರುಕಟ್ಟೆ ಮತ್ತು ದೊಡ್ಡ ಕಂಪನಿಗಳು, ನೇರ ಚಿಲ್ಲರೆ ವ್ಯಾಪಾರಿದಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಮಾರುಕಟ್ಟೆಗಳನ್ನು ಮತ್ತು ಸಣ್ಣ ವ್ಯಾಪಾರಸ್ಥರನ್ನು ಕಡೆಗಣಿಸಲಾಗುವಂತಾಗುತ್ತದೆ. ಈ ಒಪ್ಪಂದವು ಡಬ್ಲ್ಯೂಟಿ ಓ ಒಪ್ಪಂದಕ್ಕಿಂದ ಭಿನ್ನವಾಗಿದೆ. ಆರ್ ಸಿಐಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ ದೇಶದ ಕೃಷಿ ಕ್ಷೇತ್ರ ನಾಶವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಲ್ಲಾಶೆಟ್ಟಿ ಹಳ್ಳಿ ಚನ್ನಬಸಪ್ಪ, ಆವರಗೆರೆ ಗೋಶಾಲೆ ಬಸವರಾಜ್, ಹೊನ್ನೂರು ರಾಜು, ಮಹೇಶ್ವರಪ್ಪ ಕೆಂಚನಹಳ್ಳಿ, ಶಿವಕುಮಾರ್, ಗಣೇಶ್ ಸೇರಿದಂತೆ ಮತ್ತಿತರರಿದ್ದರು.



