ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ 15 ದಿನಕ್ಕೆ ಕಾಲಿಟ್ಟಿದೆ. ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಹೈಕೋರ್ಟ್ ನಿರ್ದೇಶನ ಕೊಟ್ಟರೂ ಕೂಡ ಸಾರಿಗೆ ನೌಕರರು ಪ್ರತಿಭಟನೆ ಕೈ ಬಿಟ್ಟಿಲ್ಲ. ಇದರ ಮಧ್ಯೆಯೇ ಇಂದು ನಾಲ್ಕು ನಿಗಮದಿಂದ 9,229 ಬಸ್ ಗಳು ಕಾರ್ಯಾಚರಣೆ ನಡೆಸಿವೆ. ಮಧ್ಯಾಹ್ನ 12 ಗಂಟೆ ವೇಳೆಗೆ ksrtc3430, bmtc 2123,neksrtc 1614,nwkrtc 2062 ಬಸ್ ಸೇರಿದಂತೆ ಒಟ್ಟು 9229 ಬಸ್ ಗಳು ಓಡಾಟ ನಡೆಸಿವೆ.



