ನವದೆಹಲಿ : ರಾಜಧಾನಿ ನವದೆಹಲಿಯಲ್ಲಿ ಇಂದು ರಾತ್ರಿಯಿಮದ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೆ ಮದ್ಯಪ್ರಿಯರು ಬಾರ್ ಗಳತ್ತ ದೌಡಾಯಿಸಿದ್ದು, ಬಾರ್ ಗಳ ಮುಂದೆ ಕ್ಯೂ ನಿಂತಿದ್ದಾರೆ.
ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂಪೂರ್ಣ ಲಾಕ್ ಡೌನ್ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಆತಂಕಕ್ಕೊಳಗಾಗಿರುವ ಮದ್ಯ ಪ್ರಿಯರು ದೆಹಲಿಯ ಖಾನ್ ಮಾರ್ಕೇಟ್‍ನಲ್ಲಿರುವ ಲಿಕ್ಕರ್ ಶಾಪ್ ಎದುರು ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದ್ದಾರೆ. ಈ ವೇಳೆ ಸಾಮಾಜಿಕ ಅಂತರವನ್ನು ಮರೆತಿದ್ದಾರೆ.
Delhi: People gather in large numbers outside a liquor shop in Khan Market; social distancing norms flouted.
Lockdown to be imposed in the national capital from 10pm tonight to 6am next Monday (26th April). pic.twitter.com/Fq1iNGJo1d
— ANI (@ANI) April 19, 2021
ಎಲ್ಲಾ ಖಾಸಗಿ ಕಚೇರಿ, ಕಂಪನಿಗಳು ವರ್ಕ್ ಫ್ರಂ ಹೋಮ್ ಹಾಗೂ ಸರ್ಕಾರಿ ಕಚೇರಿಗಳು ಮತ್ತು ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿದೆ. ಲಾಕ್ ಡೌನ್ ನಿಂದ ಕೋವಿಡ್ ತಡೆಯಲು ಸಾಧ್ಯವಿಲ್ಲ, ಆದರೆ ಸಣ್ಣ ಅವಧಿಯ ಲಾಕ್ ಡೌನ್ ನಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.ಆಹಾರ, ವೈದ್ಯಕೀಯ ಸೇರಿದಂತೆ ತುರ್ತು ಸೇವೆಗಳು ಮುಂದುವರಿಯಲಿದೆ. ಕೇವಲ 50 ಮಂದಿ ಆಹ್ವಾನಿತರೊಂದಿಗೆ ವಿವಾಹ ಕಾರ್ಯಕ್ರಮ ನಡೆಸಬಹುದಾಗಿದೆ.



