ಡಿವಿಜಿ ಸುದ್ದಿ, ಹೊನ್ನಾಳಿ: ಮುಖ್ಯಮಂತ್ರಿ ನಮ್ಮ ದೈತ್ಯ ಶಕ್ತಿಯಾಗಿದ್ದು, ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತನೂ ಒಂದೊಂದು ಬಂಡೆ ಇದ್ದಂತೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಅವರನ್ನು ಮಾಧ್ಯಮಗಳು ಟೈಗರ್, ಬಂಡೆ ಅಂತೆಲ್ಲ ತೋರಿಸುತ್ತಿವೆ. ಆದ್ರೆ, ಬಿಜೆಪಿಯಲ್ಲಿ ಪ್ರತಿಯೊಬ್ಬರ ಕಾರ್ಯಕರ್ತನೂ ಒಂದೊಂದು ಬಂಡೆ ಇದ್ದಂತೆ. ಈ ಬಾರಿಯ ಉಪಚುನಾವಣೆಯಲ್ಲಿ ನಾವೆಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಅನರ್ಹ ಶಾಸಕರ ವಿಚಾರ ಕೋರ್ಟ್ ನಲ್ಲಿದ್ದು, ತೀರ್ಪು ಅವರ ಪರ ಬರ ಬಹುದು ಎಂಬ ವಿಶ್ವಾಸವಿದೆ ಎಂದರು.
ಸಿದ್ದರಾಮಯ್ಯ ಹಗಲು ಕನಸು
ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಎಂದು ಹಗಲು ಗನಸು ಕಾಣುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಕಾಡಿ ಬೇಡಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಯಡಿಯೂರಪ್ಪ ಈ ಅವಧಿ ಪೂರ್ಣಗೊಳಿಸಿ ಮುಂದಿನ ಅವದಿಗೂ ಅವರೇ ಸಿಎಂ ಆಗ್ತಾರೆ ಎಂದರು.



