ಡಿವಿಜಿ ಸುದ್ದಿ,ದಾವಣಗೆರೆ: ಗ್ರಾಮದ ಸರ್ಕಾರಿ ಜಾಗವನ್ನು ಅಕ್ರಮವಾಗಿ ದೇವಸ್ಥಾನಕ್ಕೆ ಮಂಜೂರು ಮಾಡಿದ ಕ್ರಮ ವಿರೋಧಿಸಿ ಇವತ್ತು ಆನಗೋಡು ಗ್ರಾಮಸ್ಥರು ಒಡಿಒ ಮತ್ತು ಗ್ರಾಮ ಪಂಚಾಯತಿ ಸದಸ್ಯರನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಗೋಮಾಳ ಜಾಗವನ್ನು ದೇವಸ್ಥಾನಕ್ಕೆ ಮುಂಜೂರು ಮಾಡಲಾಗಿದ್ದು, ಮಂಜೂರು ಮಾಡುವಾಗ ಯಾವುದೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ . ಈ ಬಗ್ಗೆ ಪಿಡಿಒ ಅಧಿಕಾರಿ ಸ್ಪಷ್ಟನೆ ನೀಡಬೇಕು ಮತ್ತು ಈ ಕೂಡಲೇ ದೇವಸ್ಥಾನಕ್ಕೆ ಮುಂಜೂರು ಮಾಡಿದ 2 ಎಕೆರೆ ಜಾಗವನ್ನು ವಾಪಸ್ಸು ಪಡೆಯಬೇಕು ಎಂದು ಪ್ರತಿಭಟನ ನಿರತರು ಆಗ್ರಹಿಸಿದರು.
ಯಾವುದೇ ಸಾರ್ವಜನಿಕ ಸ್ವತ್ತು ಸಂಸ್ಥೆ ಅಥವಾ ದೇವಸ್ಥಾನಕ್ಕೆ ನೀಡಬೇಕಾದರೆ, ಕಾನೂನು ಕ್ರಮ ಅನುಸರಿಸಬೇಕು. ಆದರೆ, ಆನಗೋಡು ಗ್ರಾಮ ಪಂಚಾಯತಿಯಲ್ಲಿ ಯಾವುದೇ ಕಾನೂನು ಕ್ರಮ ನಿರ್ವಹಿಸದೇ ದೇವಸ್ಥಾನಕ್ಕೆ ಪಿಡಿಒ ಮುಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಘೋಷಣೆ ಕೂಗಿದರು.
ಪ್ರತಿಭಟನೆ ತೀವ್ರತೆ ಪಡೆಯುತ್ತಿದ್ದಂತೆ ತಾಲ್ಲೂಕು ಪಂಚಾಯತಿ ಸಿಇಒ ಕರೆ ಮಾಡಿ ಪ್ರತಿಭಟನೆ ನಿಲ್ಲಿಸುವಂತೆ ಗ್ರಾಮಸ್ಥರಲ್ಲಿ ಮನಮವಿ ಮಾಡಿದರು. ಸಂಜೆ ವೇಳೆಗೆ ಪಿಡಿಒ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಮಾತು ನೀಡಿದ ನಂತರ ಪ್ರತಿಭಟನಕಾರರು ಪ್ರತಿಭಟನೆ ಕೈ ಬಿಟ್ಟರು. ಒಂದು ವೇಳೆ ದೇವಸ್ಥಾನಕ್ಕೆ ನೀಡಿದ ಜಾಗ ವಾಪಸ್ಸು ಪಡೆದಿದ್ದಲ್ಲಿ ಉಗ್ರವಾಗಿ ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದರು.
ಪ್ರತಿಭಟನೆಯಲ್ಲಿ ಬಿ.ಎನ್ ಕರಿಬಸಪ್ಪ, ಬಿ.ಎನ್. ಬಸವರಾಜ್, ಜಿ. ರುದ್ರೇಶ್, ಗಿರೀಶ್, ಗಂಗಪ್ಪ, ಪರಮೇಶ್, ಗುಡಾಳ್ ಮಲ್ಲಣ್ಣ ಸೇರಿದಂತೆ ಅನೇಕರು ಭಾಗಿಯಾಗಿದ್ದರು.



