ಡಿವಿಜಿ ಸುದ್ದಿ, ದಾವಣಗೆರೆ: ಆರೂಢ ದಾಸೋಹಿ, ಧರ್ಮ ಚಿಂತಾಮಣಿ, ಮಹಾ ಶರಣ, ಅನುಪಮ ದಾನಿ ಎಂದು ಬಿರುದು ಪಡೆದ ಸಾಮಾಜಿಕ ಹೋರಾಟಗಾರ ಮಾಗನೂರು ಬಸಪ್ಪ ಅವರ 24 ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಅವರ ಧರ್ಮ ಪತ್ನಿ ಸರ್ವಮಂಗಳಮ್ಮ ಅವರ 11 ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಅ.30 ರಂದು ಸಂಜೆ 6ಗಂಟೆಗೆ ತರಳಬಾಳು ಬಡಾವಣೆಯ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ನಾ. ಲೋಕೇಶ್ ಒಡೆಯರ್, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ರಾಮಕೃಷ್ಣ ಮಿಷನ್ ನ ಶ್ರೀ ತ್ಯಾಗೀಶ್ವರಾನಂದ ಮಹಾರಾಜ್ ಸ್ವಾಮೀಜಿ ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವ ವಿದ್ಯಾಲಯದ ವೀರಭದ್ರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಜಗದೀಶ್ ಜಿ.ಎ. ಭಾಗಿಯಾಗಲಿದ್ದಾರೆ. ಮಕ್ಕಳ ತಜ್ಞ ಬಾಣಪುರಮಠ, ಲೆಕ್ಕ ಪರಿಶೋಧಕ ಎಚ್.ಆರ್. ಸುರೇಶ್, ಹಿರಿಯ ವಕೀಲ ನ್.ರಾಮದಾಸ್,ಪ್ರಗತಿಪರ ರೈತ ಎಸ್. ರಾಕೇಶ್,ಸಂಗೀತಗಾರ ಎಸ್. ವಿನಯಾ ಅವರಿಗೆ ಸನ್ಮಾನ ನಡೆಯಲಿದೆ. ಶಿಕ್ಷಣ ತಜ್ಞ ಡಾ.ಎಚ್.ವಿ. ವಾಮದೇವಪ್ಪ ನುಡಿನಮನ ಸಲ್ಲಿಸಿದ್ದಾರೆ ಎಂದರು.
ಮಾಗನೂರು ಬಸಪ್ಪ ಅವರ ಜೀನ ಆಧಾರಿತ ಸಾಕ್ಷ್ಯ ಚಿತ್ರವೂ ಇದೇ 27 ರಂದು ಬೆಳಗ್ಗೆ 8 ರಿಂದ 9 ಗಂಟೆ ವೆರೆಗೆ ಚಂದನ ಟಿವಿಯಲ್ಲಿ ಪ್ರಸಾರವಾಗಲಿದ್ದು, ಮಾಗನೂರು ಬಸಪ್ಪ ಅವರ ಅಭಿಮಾನಿಗಳು ಸಾಕ್ಷ್ಯ ಚಿತ್ರ ವೀಕ್ಷಿಸಬೇಕೆಂದು ಕೋರಿದರು.
ಮಾಗನೂರು ಬಸಪ್ಪ ಅವರು ದಾವಣಗೆರೆ ಕೇವಲ 100 ರೂಪಾಯಲ್ಲಿ ಬಂದು ಒಬ್ಬರ ದೊಡ್ಡ ಉದ್ಯಮಿಯಾಗಿ ಬೆಳೆದವರು. ಅವರು ತಮ್ಮ ವ್ಯಾಪಾರದ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದರು. ಅವರು ಯಾವುದೇ ಜಾತಿ, ಧರ್ಮ, ಪಂಥಕ್ಕೆ ಸೀಮಿತವಾಗದೆ, ಸಮಾಜ ಸೇವೆ ತೊಡಗಿದ್ದರು. ದಾವಣಗೆರೆಯ ಪ್ರಮುಖ ಬ್ಯಾಂಕ್ ಗಳಾದ ಬಾಪೂಜಿ, ಶಿವ ಸಹಕಾರ ಬ್ಯಾಂಕ್, ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸೇರಿದಂತೆ ಛಲವಾದಿ, ನಾಯಕ ಹಾಸ್ಟೆಲ್ ಸ್ಥಾಪಿಸಿದ ಕೀರ್ತಿ ಬಸಪ್ಪ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮಾಗನೂರು ಬಸಪ್ಪ ಪ್ರತಿಷ್ಠಾನ ಅಧ್ಯಕ್ಷ ಎಮ್.ಬಿ. ಸಂಗಮೇಶ ಗೌಡರು ಮಾತನಾಡಿ, ನಮ್ಮ ತಂದೆಯವರು ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಅವರು ಮಾಡಿದಷ್ಟು ಸಮಾಜ ಸೇವೆಯನ್ನು ನಾವು ಮಾಡದಿದ್ದರೂ, ನಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇವೆ. ಮುಂದಿನ ವರ್ಷ 25 ವರ್ಷದ ಪುಣ್ಯ ಸ್ಮರಣೆ ನಡೆಯಲಿದ್ದು, ಇನ್ನು ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಗನೂರು ಬಸಪ್ಪ ಪ್ರಾಥಮಿಕ ಶಾಲಾ ವಿಭಾಗ ಮುಖ್ಯಸ್ಥ ಎಸ್.ಆರ್. ಶಿರಗಂಬಿ, ಪಿ.ಯು. ಕಾಲೇಜ್ ಪ್ರಾಂಶುಪಾಲ ಜಿ.ಎನ್. ಎಚ್. ಕುಮಾರ್, ಪ್ರಾಂಶುಪಾಲೆ ಪ್ರೇಮಾ, ಸಹಾಯಕ ಪ್ರಾಧ್ಯಾಪಕಿ ಅನಿತಾ, ಉಪನ್ಯಾಸಕ ಲೋಹಿತ್ ಕುಮಾರ್, ಪ್ರೌಢಶಾಲಾ ಶಾಲಾ ವಿಭಾಗ ಕುಸುಮ, ಪಬ್ಲಿಕ್ ಸ್ಕೂಲ್ ನ ವಾಣಿಶ್ರೀ , ಗ್ರಂಥಾಲಯ ವಿಭಾಗದ ಗಿರೀಶ್ ಭಾಗಿಯಾಗಿದ್ದರು.



