ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ 6,976 ಮಂದಿಗೆಕೊರೊನಾಪಾಸಿಟಿವ್ಕೇಸ್ ಗಳು ಪತ್ತೆಯಾಗಿವೆ. ಇನ್ನು ಸೋಂಕಿನಿಂದ 35 ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,33,560 ಕ್ಕೆ ಏರಿಕೆಯಾಗಿದೆ. ಇಂದು 2794 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 9,71556 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 49, 254 ಸಕ್ರಿಯ ಪ್ರಕಣಗಳಿವೆ. ಇದುವರೆಗೆ 12,731 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಇಂದು 4991 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,19,508 ಕ್ಕೆ ಏರಿಕೆಯಾಗಿದೆ. ಇಂದು 25 ಜನರು ಕೊರೊನಾ ಬಲಿಯಾಗಿದ್ದು, ಇದುವರೆಗೆ 4718 ಸೋಂಕಿತರು ಸಾವನ್ನಪ್ಪಿದ್ದಾರೆ