ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಜ್ಜಿ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿದ್ದು, 3.62 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ ಪಿ ನರಸಿಂಹ ವಿ. ತಾಮ್ರಧ್ವಜ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಕಾಡಜ್ಜಿ ಗ್ರಾಮದ ಸರ್ವೆ ನಂಬರ್ 54/1ಪಿ ಹಾಗೂ 53/4 ರಲ್ಲಿನ ಷಣ್ಮುಖಪ್ಪ ಎಂಬುವರಿಗೆ ಸೇರಿದ ಶ್ರೀ ದುರ್ಗಾದೇವಿ ಎಕ್ಸ್ ಪೋಸಿವ್ ಮ್ಯಾಗಜೀನ್ ಮುಂಭಾಗದಲ್ಲಿ ಸ್ಫೋಟಕಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವಾಗ ದಾಳಿ ಮಾಡಲಾಗಿದ್ದು, ಸ್ಫೋಟಕ ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ ಜಿಲೆಟಿನ್ ಗಳು , ಎಲೆಕ್ಟ್ರಿಕ್ ಡಿಟೋನೇಟರ್ ಗಳು, 04 ಕಾಯಲ್, ಆಪ್ ಟೆಕ್ಸ್ ಅಲ್ಯೂಮಿನಿಯಂ ನೈಟ್ರೇಟ್ ಪೌಡರ್ 50 ಕೆಜಿ 05 ಚೀಲ ಸೇರಿ ಸುಮಾರು 3.62 ಲಕ್ಷ ಸ್ಪೋಟಕ ವಶಕ್ಕೆ ಪಡೆಯಲಾಗಿದೆ. ಇನ್ನೂ ಸಾಗಾಟಕ್ಕೆ ಬಳಸಿದ್ದ ಬುಲೆರೋ ಪೊಕ್ ಅಪ್ ವಾಹನ , ಬೈಕ್ , ಪ್ಯಾಸ್ಟಿಕ್ ಪಾಟು, 29 ಪಾಕೇಟ್ ವೇಸ್ಟ್ ಕಾಟನ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ ಬಿ.ಎಸ್ ವಿಕ್ರಮ್, ನಾಗರಾಜ್ ಕೆ, ವಿಜಯ್ ಕುಮಾರ್, ಮಂಜುನಾಥ್ ವಶಕ್ಕೆ ಪಡೆಯಲಾಗಿದೆ. ಗೋಡಾನ್ ಮಾಲೀಕರಾದ ಷಣ್ಮುಖಪ್ಪ ಮತ್ತು ಮುಜಿಬ್ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.