ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆಯ ಯಲ್ಲಮ್ಮನಗರ ಮತ್ತು ಭಾರತ್ ಕಾಲೋನಿ ಉಚುನಾವಣೆಯಲ್ಲಿ ಒಟ್ಟು 14 ನಾಮಪತ್ರ ಕ್ರಮ ಬದ್ಧವಾಗಿದ್ದು, ಯಲ್ಲಮ್ಮನಗರದ ಪಕ್ಷೇತರರೊಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ.
ಯಲ್ಲಮ್ಮನಗರದಲ್ಲಿ 11 ಮಂದಿ 12 ನಾಮಪತ್ರ ಸಲ್ಲಿಸಿದ್ದರು, ಇದರಲ್ಲಿ ದೇವರಾಜ ಅರಸು ಬಡಾವಣೆಯ ಎಸ್.ಕೆ. ಅಫ್ಜಲ್‌ಖಾನ್ ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಕಾಂಗ್ರೆಸ್‌ನಿಂದ ಎಸ್. ರವಿಸ್ವಾಮಿ, ಬಿಜೆಪಿಯಿಂದ ಶಿವಾನಂದ ಆರ್. ನಾಮಪತ್ರ ಸೇರಿದಂತೆ ಎಲ್ಲ ಪಕ್ಷೇತರರ ನಾಮಪತ್ರ ಕ್ರಮ ಬದ್ಧವಾಗಿದೆ.
ಭಾರತ್ ಕಾಲೊನಿಯಲ್ಲಿ ಬಿಜೆಪಿಯ ರೇಣುಕಾ ಎಂ. ಕೃಷ್ಣ ಅವರು ಎರಡು ನಾಮಪತ್ರ ಸಲ್ಲಿಸಿದ್ದರು. ಎರಡು ಕೂಡ ಕ್ರಮ ಬದ್ಧವಾಗಿದ್ದವು. ಅದರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರವನ್ನು ಮಾತ್ರ ಪರಿಗಣಿಸಲಾಗುವುದು. ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀನಾಕ್ಷಿ ಎಂ. ಜಗದೀಶ್ ಸಲ್ಲಿಸಿರುವ ನಾಮಪತ್ರ ಸಹ ಕ್ರಮಬದ್ಧವಾಗಿದೆ ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.