ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ದಾವಣಗೆರೆ ಸಿಟಿ ಸುತ್ತಮುತ್ತಲಿನ ಪ್ರದೇಶದ ರೈತರ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ.
ದಾವಣಗೆರೆಯಿಂದ ಹರಿಯುವ ಕೊಂಡಜ್ಜಿ, ಕಕ್ಕರ ಗೊಳ್ಳ, ಬುಳ್ಳಾಪುರ, ಕೆಂಚನಹಳ್ಳಿ, ಕರ್ಲಹಳ್ಳಿ, ಸಾರಥಿ ಮೂಲಕ ತುಂಗಾಭದ್ರ ನದಿ ಸೇರುವ ಹಳ್ಳ ಉಕ್ಕಿ ಹರಿಯುತ್ತಿದ್ದು, ಹಳ್ಳದ ದಂಡದಲ್ಲಿರುವ ಬೆಳೆದಿದ್ದ ಅಪಾರ ಪ್ರಮಾಣದ ಭತ್ತದ ಬೆಳೆಗಳಿಗೆ ನೀರು ನುಗ್ಗಿದೆ.
ದಾವಣಗೆರೆ ರಾಜಕಾಲುವೆಗಳಿಂದ ಸಂಗ್ರಹವಾದ ನೀರು ಹಳ್ಳದ ರೂಪದಲ್ಲಿ ಬೇತೂರು, ಬೂದಾಳ್, ಆವರಗೊಳ್ಳ, ಕಕ್ಕರಗೊಳ್ಳ, ಕೊಂಡಜ್ಜಿ ಮಾರ್ಗವಾಗಿ ಹರಿಯುತ್ತಿದೆ. ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಸುರಿದ ಸತತ ಮಳೆಗೆ ಹಳ್ಳ ಉಕ್ಕ ಹರಿಯುತ್ತಿದೆ.



