ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ದಕ ಬಳಸುವುದಕ್ಕೆ ನಿಯಮಗಳನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಪ್ರಕಟಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ದಕ ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ.
ಮಸೀದಿಗಳಲ್ಲಿ ಆಜಾನ್ ಮತ್ತು ಇತರ ಪ್ರಮುಖ ಪ್ರಕಟಣೆಗಳಿಗೆ ಮಾತ್ರವೇ ಧ್ವನಿವರ್ದಕ ಬಳಸಬೇಕು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಬಳಕೆಗೆ ಅವಕಾಶವಿಲ್ಲ. ಆಸ್ಪತ್ರೆ, ಶೈಕ್ಷಣಿಕ ಕೇಂದ್ರಗಳ ಸುತ್ತ ಮುತ್ತಲಿನ 100 ಮೀಟರ್ ಜಾಗವನ್ನು ಸೈಲೆನ್ಸ್ ಝೋನ್ ಎಂದು ಕರೆಯಲಾಗಿದೆ. ಈ ಪ್ರದೇಶದಲ್ಲಿ ಧ್ವನಿವರ್ದಕ ಬಳಕೆಗೆ ಅವಕಾಶವಿಲ್ಲ ಎಂದು ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ವೇಳೆ ಈ ನಿಯಮಗಳನ್ನು ತಪ್ಪಿದಲ್ಲಿ ಅದಕ್ಕೆ ಸೂಕ್ತ ದಂಡವನ್ನು ವಿಧಿಸುವುದಾಗಿ ತಿಳಿಸಿದೆ.



