ಬೆಂಗಳೂರು: 10 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿದ್ರೆ, ಸಾಂಕೇತಿಕ ದರದಲ್ಲಿ ಮರಳು ನೀಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ದಾವಣಗೆರೆ: 4,912 ಅಕ್ರಮ ಬಿಪಿಎಲ್ ಕಾರ್ಡ್ ರದ್ದು; RTO ಇಲಾಖೆಯಿಂದ ಕಾರು ಖರೀದಿದಾರರ ಮಾಹಿತಿ ಸಂಗ್ರಹ..!
ವಿಧಾನಪರಿಷತ್ ನಲ್ಲಿ ಮಾತನಾಡಿದ ಅವರು, ಬಡವರಿಗೆ ಅನುಕೂಲವಾಗುವಂತೆ 10 ಲಕ್ಷದ ೊಳಗಿನ ಮನೆಗೆ ಕಲ್ಲು, ಮರಳನ್ನು ಸಾಂಕೇತಿಕ ಬೆಲೆಯಲ್ಲಿ ಪೂರೈಸುವ ನೂತನ ನೀತಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.
ಗಣಿ ಇಲಾಖೆಯಲ್ಲಿ ಹೊಸತನ ತರಲು ಕ್ರಮಕೈಗೊಳ್ಳಲಾಗಿದೆ. ಸ್ಪೋಟಕ ಬಳಕೆಗೆ ಹೆಚ್ಚಿನ ಜನ ಲೈಸೆನ್ಸ್ ಪಡೆದುಕೊಂಡಿಲ್ಲ. ಇದಕ್ಕೆ ಕಾರಣ ಸಮಸ್ಯೆಗಳು ಕಾರಣವಾಗಿದ್ದು ಎಲ್ಲರೂ ಕಡ್ಡಾಯವಾಗಿ ಲೈಸೆನ್ಸ್ ಪಡೆಯಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಸ್ಪೋಟಕಗಳ ಲೈಸೆನ್ಸ್ ಪಡೆಯಲು 60 ದಿನಗಳ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.



