Connect with us

Dvgsuddi Kannada | online news portal | Kannada news online

ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ  

ಪ್ರಮುಖ ಸುದ್ದಿ

ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ  

ಬೆಂಗಳೂರು: ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ಈಗ ಮತ್ತೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ.24ರಿಂದ ಜೂನ್ 16ರವರೆಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ.

ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಎ ಮೇ. 24 ರಿಂದ ಪ್ರಾರಂಭಿಸಿ, ಜೂನ್. 10ರವರೆಗೆ ನಡೆಸಲು ದಿನಾಂಕ 29-01-2021ರಂದು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ,  ವೇಳಾಪಟ್ಟಿಯನ್ನು ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ವಿದ್ಯಾರ್ಥಿಗಳಿಗೆ ದಿನಾಂಕ 06-02-2021ರವರೆಗೆ ಅವಕಾಶ ನೀಡಲಾಗಿತ್ತು.

ತಾತ್ಕಾಲಿಕ ವೇಳಾಪಟ್ಟಿಗೆ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಮೇ. 24ರಿಂದ ಜೂ16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾ ಪಟ್ಟಿ ಪ್ರಕಟಿಸಲಾಗಿದೆ.  ಜೂನ್ 14 ರಂದು IPMAT ಮತ್ತು NEST ಪರೀಕ್ಷೆಗಳು ನಡೆಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರಿಷ್ಕೃತ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಲಾಗಿರುವುದಾಗಿ ತಿಳಿಸಿದ್ದಾರೆ.

  • ಮೇ 24, ಸೋಮವಾರ: ಇತಿಹಾಸ
  • ಮೇ 25, ಮಂಗಳವಾರ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
  • ಮೇ 26, ಬುಧವಾರ: ಭೂಗೋಳಶಾಸ್ತ್ರ
  • ಮೇ 27, ಗುರುವಾರ: ಮನಃಶಾಸ್ತ್ರ, ಬೇಸಿಕ್​ ಮ್ಯಾಥ್ಸ್​
  • ಮೇ 28, ಶುಕ್ರವಾರ: ತರ್ಕಶಾಸ್ತ್ರ
  • ಮೇ 29, ಶನಿವಾರ: ಕನ್ನಡ
  • ಮೇ 31, ಸೋಮವಾರ: ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
  • ಜೂನ್​ 1, ಮಂಗಳವಾರ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್​, ಹೆಲ್ತ್​ಕೇರ್​, ಬ್ಯೂಟಿ ಮತ್ತು ವೆಲ್​ನೆಸ್​ (NSQF)
  • ಜೂನ್​ 2, ಬುಧವಾರ: ರಾಜ್ಯಶಾಸ್ತ್ರ, ಗಣಕ ವಿಜ್ಞಾನ
  • ಜೂನ್​ 3, ಗುರುವಾರ: ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
  • ಜೂನ್ 4, ಶುಕ್ರವಾರ: ಅರ್ಥಶಾಸ್ತ್ರ
  • ಜೂನ್ 5, ಶನಿವಾರ: ಗೃಹವಿಜ್ಞಾನ
  • ಜೂನ್​ 7, ಸೋಮವಾರ: ವ್ಯವಹಾರ ಅಧ್ಯಯನ, ಭೌತಶಾಸ್ತ್ರ
  • ಜೂನ್ 8, ಮಂಗಳವಾರ: ಭೂಗರ್ಭಶಾಸ್ತ್ರ
  • ಜೂನ್ 9, ಬುಧವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
  • ಜೂನ್ 10, ಗುರುವಾರ: ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
  • ಜೂನ್ 11, ಶುಕ್ರವಾರ: ಉರ್ದು, ಸಂಸ್ಕೃತ
  • ಜೂನ್ 12, ಶನಿವಾರ: ಸಂಖ್ಯಾಶಾಸ್ತ್ರ
  • ಜೂನ್​ 14, ಸೋಮವಾರ: ಐಚ್ಛಿಕ ಕನ್ನಡ
  • ಜೂನ್ 15, ಮಂಗಳವಾರ: ಹಿಂದಿಜೂನ್​ 16, ಬುಧವಾರ: ಇಂಗ್ಲೀಷ್

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top