ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್‌ಇ ) ಸಿಬಿಎಸ್‌ಇ 10ನೇ ತರಗತಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ನೂತನ ಪರೀಕ್ಷೆಯ ವೇಳಾಪಟ್ಟಿ ಪ್ರಕಾರ, ಮೇ 4 ರಿಂದ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಮೇ 14 ರಂದು ರಂಜಾನ್ ಹಬ್ಬದ ರಜೆ ಕಾರಣ ಸಿಬಿಎಸ್‌ಇ ತನ್ನ ಪರೀಕ್ಷೆಯ ವೇಳಾಪಟ್ಟಿಯನ್ನ ಬದಲಾಯಿಸಿದೆ.
ಪರಿಷ್ಕೃತ ಪರೀಕ್ಷಾ ಕಾರ್ಯಕ್ರಮದ ಕೊನೆಯಲ್ಲಿ ಅಗತ್ಯ ಪರೀಕ್ಷಾ ಮಾರ್ಗಸೂಚಿಗಳನ್ನು ಸಿಬಿಎಸ್ ಇ ಹೊರಡಿಸಿದೆ. ಅಲ್ಲದೆ, ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಿಬಿಎಸ್ ಇ ವೆಬ್ ಸೈಟ್ cbse.nic.in ಲಭ್ಯಇರುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.





