ದಾವಣಗೆರೆ: ಪಾಲಿಕೆ ಸದಸ್ಯರಾಗಿದ್ದ ದೇವರ ಮನಿ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ನೋವಾಗಿದ್ದರಿಂದ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಮಾತನಾಡಲ್ಲ. ನಾವು ಅವರಿಗೆ ಯಾವುದೇ ಆಮಿಷವೊಡ್ಡಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. ದಾವಣಗೆರೆ ಮೇಯರ್ ಚುನಾವಣೆ; ಬಿಜೆಪಿಗೆ ಭರ್ಜರಿ ಜಯ; ಎಸ್. ಟಿ. ವೀರೇಶ್ ನೂತನ ಮೇಯರ್ ; ಶಾಮನೂರು ಶಿವಶಂಕರಪ್ಪ ಚುನಾವಣೆಗೆ ಗೈರು
ದೇವರಮನಿ ಶಿವಕುಮಾರ್ ನಿನ್ನೆ ಸ್ವತ: ಅವರೇ ಫೋನ್ ಮಾಡಿ, ಬಿಜೆಪಿ ಸೇರ್ತಿನಿ ಎಂದಿದ್ದರು. ಹೀಗಾಗಿ ನಾವು ಅವರಿಗೆ ಯಾವುದೇ ಷರತ್ತು ಹಾಕದೇ ಸೇರಿಸಿಕೊಂಡಿದ್ದೇವೆ. ಅವರು ಕೂಡ ಯಾವುದೇ ಆಮೀಷಕ್ಕೆ ಒಳಗಾಗಿಲ್ಲ. ಅವರು ಅಂತಹ ವ್ಯಕ್ತಿ ಕೂಡ ಅವರಲ್ಲ. ಶಿವಕುಮಾರ್ ಯಾಕೆ ಕಾಂಗ್ರೆಸ್ ತರೆದು ಬಿಜೆಪಿ ಸೇರಿದರು ಎಂಬುದನ್ನು ನೀವು ಅವರನ್ನೇ ಕೇಳಬೇಕು. ನನ್ನ ಬಳಿ ಕೇಳಿದರೇ ನಾನು ಏನು ಉತ್ತರ ಕೊಡಲಿ. ಇನ್ನು ಯಾರು ಬಿಜೆಪಿ ಸೇರ್ತಾರೆ ಎಂದಿದ್ದಕ್ಕೆ ವೇಟ್ ಆ್ಯಂಡ್ ಸಿ ಎಂದರು. ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿಯಲ್ಲಿ ಮಾತ್ರ ಗುರುತಿಸಲು ಸಾಧ್ಯ: ನೂತನ ಮೇಯರ್ ಎಸ್.ಟಿ. ವೀರೇಶ್



