ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಎಸ್. ಟಿ. ವೀರೇಶ್ ಹಾಗೂ ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ. ದಾವಣಗೆರೆ ಮೇಯರ್ ಚುನಾವಣೆ; ಬಿಜೆಪಿಗೆ ಭರ್ಜರಿ ಜಯ; ಎಸ್. ಟಿ. ವೀರೇಶ್ ನೂತನ ಮೇಯರ್ ; ಶಾಮನೂರು ಶಿವಶಂಕರಪ್ಪ ಚುನಾವಣೆಗೆ ಗೈರು
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೂತನ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ಗುರುತಿಸಿ ಸ್ಥಾನ ಮಾನ ನೀಡಲಾಗುತ್ತದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಈಗ ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ. ನಗರದ ಜನರಿಗೆ ಮೊದಲು ಸ್ವಚ್ಚತೆ, ಬೀದಿ ದೀಪ ವ್ಯವಸ್ಥೆ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು. ದಾವಣಗೆರೆ ಮೇಯರ್ ಚುನಾವಣೆ: ಕಾಂಗ್ರೆಸ್ ಸೋಲು, ಮೂರು ಎಂಎಲ್ಸಿ, ಶಾಸಕ ಶಾಮನೂರು ಶಿವಶಂಕರಪ್ಪ ಗೈರಿಗೆ ಕಾರಣ ಏನು ಗೊತ್ತಾ..?
ಮಹಾನಗರ ಪಾಲಿಕೆಗೆ ಒಂದು ವ್ಯಾಟ್ಸಾಪ್ ನಂಬರ್ ರಚಿಸಲಾಗುವುದು. ಈ ನಂಬರ್ ಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದು. ಈ ಮೂಲಕ ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು



