ಹರಪನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಸರ್ವಧರ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಯೋಜನಾಧಿಕಾರಿ ಗಣೇಶ್ ಮರಾಟೆ ಹೇಳಿದರು.
ತಾಲ್ಲೂಕು ಉಚ್ಚಂಗಿದುರ್ಗದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮೇಗಳಗೇರಿ ವಲಯದ ಒಕ್ಕೂಟ ಸಭೆ ಉದ್ಘಾಟಿಸಿ ಮಾತನಾಡಿದರು. ಸುಮಾರು 50,000 ಸ್ವಸಹಾಯ ಸಂಘಗಳು ಸಂಘದ ಸದಸ್ಯರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿ ಎಲ್ಲಾ ಧರ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಹಿರೇಮೆಗಳಗೇರಿ ಹಾಗೂ ಉಚ್ಚಂಗಿದುರ್ಗ,ರಾಮಘಟ್ಟ,ಯು. ಕಲ್ಲಹಳ್ಳಿ,ಚಿಕ್ಕಮೆಗಳಗೆರೆ, ಒಕ್ಕೂಟದ ಪದಾಧಿಕಾರಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಡಿ ಬರುವ ಸ್ವಸಹಾಯ ಸಂಘಗಳು ಆರ್ಥಿಕವಾಗಿ ಸಬಲತೆಯನ್ನು ಹೊಂದುವ ಉದ್ದೇಶ ತಿಳಿಸಿದರ. ಸದಸ್ಯರಿಗೆ ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಉಚ್ಚಂಗಿದುರ್ಗದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಯೋಜನೆ ಮೇಲ್ವಿಚಾರಕ ಮಂಜುನಾಥ್, ತಾಲ್ಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ಪ್ರತಿಮಾ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.



