ನವದೆಹಲಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಸ್ವಂತ ಹೆಸರಲ್ಲಿ ಭೂಮಿ ಹೊಂದಿದ ರೈತರಿಗೆ ಮಾತ್ರ ಇನ್ಮುಂದೆ 6,000 ರೂ. ನೀಡಲಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದುವರೆಗೆ ಮೃತಪಟ್ಟ ರೈತರಿದ್ದರೆ, ಅದಕ್ಕೆ ಪೂರಕ ದಾಖಲೆ ಸಲ್ಲಿಸಿ ಪತ್ನಿ ಅಥವಾ ಅವರ ಮಕ್ಕಳ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು. ಆದರೆ, ಈಗ ಯೋಜನೆಯ ಪ್ರಯೋಜನ ಪಡೆಯಬೇಕಾದರೆ, ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳಬೇಕಿದೆ. ಇನ್ನೂ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳದ ರೈತರಿಗೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ತಂದೆ ಅಥವಾ ಅಜ್ಜನ ಹೆಸರಲ್ಲಿ ಜಮೀನಿದ್ದು ಮೊಮ್ಮಗ ಉಳುಮೆ ಮಾಡುತ್ತಿದ್ದರೂ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ತಮ್ಮ ಹೆಸರಲ್ಲಿ ಜಮೀನಿನ ಮಾಲೀಕತ್ವ ಹೊಂದಿರಬೇಕಿದೆ. ಬಹುತೇಕ ರೈತರು ತಮ್ಮ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಂಡಿಲ್ಲದ ಕಾರಣ ಅವರಿಗೆ ಯೋಜನೆ ಪ್ರಯೋಜನ ತಪ್ಪುವ ಸಾಧ್ಯತೆ ಇದೆ.