ರಾಯಚೂರು: ಶಾಲೆ ಫೀಸ್ ಕಟ್ಟುವಂತೆ ಕಿರುಕುಳ ಕೊಟ್ಟಿದ್ದಲ್ಲದೆ, ಪೋಷಕರ ಕಪಾಳಮೋಕ್ಷ ಮಾಡಿದ ಶಾಲಾ ಮುಖ್ಯಸ್ಥರ ವಿರುದ್ಧ ಎಫ್ ಐ ಆರ್ ದಾಖಲಿಸಿ, ಬಂಧಿಸದ ಘಟನೆ ರಾಯಚೂರಲ್ಲಿ ನಡೆದಿದೆ.
10ನೇ ತರಗತಿಯ ವಿದ್ಯಾರ್ಥಿ ಸಂಪತ್ ಗೆ 80,000 ರೂಪಾಯಿ ಫೀಸ್ ಕಟ್ಟುವಂತೆ ಕಿರುಕುಳ ನೀಡಲಾಗುತ್ತಿತ್ತು. ಪೊಲೀಸರ ಮುಂದೆಯೇ ಸಂಪತ್ ತಾಯಿ ನಾಗವಿದ್ಯಾರಿಗೆ(40) ಕಪಾಳಮೋಕ್ಷ ಮಾಡಿದ ಹಿನ್ನೆಲೆಯಲ್ಲಿ, ಮಾಂಟೆಸ್ಸರಿ ಶಾಲೆ ಮುಖ್ಯಸ್ಥ ಸತೀಶಕುಮಾರ್ ವಿರುದ್ಧ FIR ದಾಖಲಾಗಿದ್ದು, ಬಂಧನಕ್ಕೊಳಗಾಗಿದ್ದಾರೆ.
ಶಾಲಾ ಮುಖ್ಯಸ್ಥ ಸತೀಶಕುಮಾರ್ ಹಾಗೂ ಪತ್ನಿ ಜ್ಯೋತಿ, ಸಂಪತ್ಗೆ ತಾವು ಹೇಳಿದಷ್ಟೂ ಫೀಸ್ ಅನ್ನು ಕಟ್ಟುವಂತೆ ಪ್ರತಿನಿತ್ಯ ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದರು. ಈ ಕುರಿತಂತೆ ಸಂಪತ್ ಪೋಷಕರು ಟಿಸಿ ಕೊಡುವಂತೆ ಕೇಳಿದ್ದರೂ, ಟಿಸಿ ಕೊಡಲು ನಿರಾಕರಿಸಿ ಫೀಸ್ ಕಟ್ಟುವಂತೆ ಒತ್ತಾಯಿಸುತ್ತಿದ್ದರು. ನಂತರ ಫೀಸ್ ಕಟ್ಟಿಲ್ಲವೆಂದು ಪೊಲೀಸರಲ್ಲಿ ಸಂಪತ್ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ
ವಿಚಾರಣೆಗೆಂದು ಪೊಲೀಸರು ಶಾಲಾ ಮುಖ್ಯಸ್ಥ ಮತ್ತು ಪೋಷಕರನ್ನು ಕರೆಸಿದ ವೇಳೆ ಸರ್ಕಲ್ ಇನ್ಸ್ಫೆಕ್ಟರ್ ಮುಂದೆಯೇ ಮುಖ್ಯಸ್ಥ ಸತೀಶ್ಕುಮಾರ್, ಸಂಪತ್ ತಾಯಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಹಾಗೂ ಮಾನಭಂಗಕ್ಕೆ ಯತ್ನ ಮಾಡಿದ್ದು, ಪೊಲೀಸರ ಮುಂದೆಯೇ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸತೀಶ್ಕುಮಾರ್ ವಿರುದ್ಧ FIR ದಾಖಲಿಸಲಾಗಿದೆ. ಸಿಂಧನೂರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಐಪಿಸಿ ಸೆಕ್ಷನ್ 323, 324,354, 504,506 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.