ಬೆಂಗಳೂರು: ಜೀವ ವೈವಿಧ್ಯತೆ ಬಿಂಬಿಸುವ ಹಾಗೂ ಅತ್ಯಂತ ಜನಪ್ರಿಯತೆ ಪಡೆದಿರುವ ನ್ಯಾಷನಲ್ ಜಿಯೋಗ್ರಾಫಿಕ್ (national geographic)ಚಾನೆಲ್ ಇಂದಿನಿಂದ (ಜ.31) ಕನ್ನಡದಲ್ಲಿ ತನ್ನ ಪ್ರಸಾರ ಆರಂಭಿಸಿದೆ.
ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಈಗಾಗಲೇ ಇಂಗ್ಲಿಷ್ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು ಇದಕ್ಕೆ ಈಗ ಕನ್ನಡವೂ ಸೇರ್ಪಡೆಗೊಂಡಿದೆ.ಹಿಂದಿಯೇತರ ಪ್ರದೇಶಗಳ ಜನತೆ ಅತಿ ಹೆಚ್ಚು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುವ ಕಾರಣ ಅವರುಗಳಿಗೆ ಮಾತೃ ಭಾಷೆಯಲ್ಲಿಯೇ ಮಾಹಿತಿ ನೀಡಬೇಕೆಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ.