ಶಿವಮೊಗ್ಗ : ಜಿಲ್ಲೆಯ ಹುಣಸೋಡು ಬಳಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶನ್ನಾಗಿ ಘೋಷಿಸಿಸಲಿ: ಉದ್ಧವ್ ಠಾಕ್ರೆ
ಹುಣಸೋಡು ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲುಗಂಗೂರು ಗ್ರಾಮದ ಸರ್ವೆ ನಂ.02 ನಲ್ಲಿ ಕ್ರಷರ್ ನಡೆಯುತ್ತಿದೆ. ಆ ಜಮೀನು ಕುಲಕರ್ಣಿ ಎಂಬುವರಿಗೆ ಸೇರಿದ್ದು, ಸುಧಾಕರ್ ಲೀಸಿಗೆ ಪಡೆದು ಕ್ರಷರ್ ನಡೆಸುತ್ತಿದ್ದಾರೆ. ಸ್ಪೋಟದ ಕುರಿತು ಪೋಲೀಸ್ ಅಧಿಕಾರಿಗಳು ಆಂಧ್ರಪ್ರದೇಶದಿಂದ ಜಿಲೆಟಿನ್ ಕಡ್ಡಿಗಳು ಬಂದಿವೆ ಎನ್ನುತ್ತಿದ್ದಾರೆ. ಜಿಲೆಟಿನ್ ಕಡ್ಡಿಗಳನ್ನು ಸರಬರಾಜು ಮಾಡುವ ಆಂಧ್ರದ ವ್ಯಕ್ತಿಯು ಸ್ಫೋಟಕಗಳ ಪೂರೈಕೆಗೆ ಅನುಮತಿ ಪಡೆಯಬೇಕು. ಆದರೆ ಈ ಸ್ಫೋಟಕಗಳ ಬಳಕೆ ಬಗ್ಗೆ ಯಾವುದೇ ಇಲಾಖೆಯ ಅನುಮತಿ ಪಡೆದಿಲ್ಲ, ಹಲವು ವರ್ಷದಿಂದ ಇಲ್ಲಿ ಅಕ್ರಮ ನಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ರಾಜಕೀಯ ಪ್ರಭಾವ ಇರೋದು ಕಂಡುಬರುತ್ತಿದೆ ಎಂದರು. ನಾಳೆಯಿಂದ ಅಧಿವೇಶನ; ಫೆ. 5 ವರೆಗೆ ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಸಿಎಂ ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬರದೇ ಅಕ್ರಮವಾಗಿ ನಡೆಯುತ್ತಿವೆಯೇ..? ಅಕ್ರಮದ ಬಗ್ಗೆ ಕಾರ್ಯಕರ್ತರೊಬ್ಬರು ಅವರ ಗಮನಕ್ಕೆ ತಂದಿಲ್ಲವೇ..? ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರೇ ಅಧಿಕಾರಿಗಳಿಗೆ ಸುಮ್ಮನ್ನಿರಿ ಎಂದರೇ ಏನು ಮಾಡಲು ಸಾಧ್ಯ. ಅಕ್ರಮ ನಡೆಯುತ್ತಿರುವುದರ ಜವಾಬ್ದಾರಿಯನ್ನು ಅಧಿಕಾರದಲ್ಲಿರುವವರೇ ಹೊರಬೇಕು. ಕ್ವಾರಿಯಲ್ಲಿ ಅನುಮತಿ ಇಲ್ಲದೇ ಸ್ಫೋಟ ಮಾಡುತ್ತಿದ್ದರೇ, ಜಿಲ್ಲಾಡಳಿತ ಇಷ್ಟು ಸಮಯ ಏಕೆ ನಿದ್ರಾವಸ್ಥೆಯಲ್ಲಿದೆ? ಎಂದು ಪ್ರಶ್ನಿಸಿದರು.
ಸರಕಾರ ಮೃತಪಟ್ಟ ಕಾರ್ಮಿಕರಿಗೆ 5 ಲಕ್ಷ ರೂ. ಘೋಷಣೆ ಮಾಡಿದೆ. ಅದ್ರೇ, ತಾಂತ್ರಿಕ ಕಾರಣದಿಂದ ಇದುವರೆಗೂ ಮೃತರಿಗೆ ಹಣ ಕೊಟ್ಟಿಲ್ಲ.. ಮಾನವೀಯತೆ ಆಧಾರದ ಮೇಲೆ ತಕ್ಷಣವೇ ಪರಿಹಾರ ಕೊಡಬೇಕು.. ಜೊತೆಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಮೃತರಿಗೆ ಹೆಚ್ಚಿನ ಪರಿಹಾರದ ಜೊತೆಗೆ, ಆರೋಪಿಗಳ ವಿರುದ್ಧ ಮರ್ಡರ್ ಕೇಸ್ ದಾಖಲಿಸಬೇಕು. ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಜಿಲ್ಲಾಧಿಕಾರಿಗಳಿಂದ ತನಿಖೆ ಮಾಡಿಸಿದರೇ ಆರೋಪಿಗಳಿಗೆ ಹೇಗೆ ಶಿಕ್ಷೆಯಾಗುತ್ತೇ ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.



