ದಾವಣಗೆರೆ: ಇಂದು ಬೆಳಗಿನಜಾವ ನಗರದ ಆಂಜನೆಯ ಫ್ಲೋರ್ ಮಿಲ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಕ್ಯಾಂಟರ್ ವೇಗವಾಗಿ ಬರುತ್ತಿದ್ದ ಕಾರಣ ಪಲ್ಟಿಯಾಗಿದೆ. ನಿದ್ದೆ ಮಂಪರಿನಲ್ಲಿ ಚಾಲಕ ಡಿವೈಡರ್ ಮೇಲೆ ವಾಹನ ಹತ್ತಿಸಿದ್ದಾನೆ. ಭದ್ರಾವತಿಯಿಂದ ಹರಪನಳ್ಳಿಗೆ ಕುರಿ ತರಲು ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.