ನವದೆಹಲಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಐತಿಹಾಸಿಕ ಸರಣಿ ಗೆದ್ದಿದೆ. ಅದರಲ್ಲೂ ಅನುಭವಿಗಳ ಅನುಪಸ್ಥಿತಿಯಲ್ಲಿ ಯುವ ಆಟಗಾರರು ವಿದೇಶದಲ್ಲಿ ಅಮೋಘ ಸಾಮರ್ಥ್ಯ ತೋರಿದ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. ಇದೇ ಸಂಭ್ರಮದಲ್ಲಿ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ, ಮಹೀಂದ್ರಾ ಥಾರ್ ಎಸ್ ಯುವಿ ಕಾರನ್ನು ಭಾರತದ ಆರು ಯುವ ಸದಸ್ಯರಿಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಸರಣಿ ಟ್ವೀಟ್ ಗಳಲ್ಲಿ ಈ ಘೋಷಣೆ ಯನ್ನು ಮಾಡಿದ ಮಹೀಂದ್ರಾ, ತಂಡದ ಕಠಿಣ ಪರಿಶ್ರಮ ಮತ್ತು ಸಂಕಲ್ಪವನ್ನು ಹೊಗಳಿದ್ದಾರೆ. ಥಾರ್ ಎಸ್ ಯುವಿ ಪಡೆಯಲಿರುವ ಯುವ ಆಟಗಾರರಾ ವಿವರ ನೀಡಿದೆ. ಮೊಹಮ್ಮದ್ ಸಿರಾಜ್, ಟಿ.ನಟರಾಜನ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ನವದೀಪ್ ಸೈನಿ ಈ ಕಾರು ಪಡೆಯಲಿದ್ದಾರೆ.
Six young men made their debuts in the recent historic series #INDvAUS (Shardul’s 1 earlier appearance was short-lived due to injury)They’ve made it possible for future generations of youth in India to dream & Explore the Impossible (1/3) pic.twitter.com/XHV7sg5ebr
— anand mahindra (@anandmahindra) January 23, 2021



