ನವದೆಹಲಿ : ನನ್ನ ಬಳಿ ಯಾವುದೇ ಸಿಡಿಯೂ ಇಲ್ಲ. ಇದೆಲ್ಲಾ ಗಾಳಿ ಸುದ್ದಿಯಾಗಿದೆ. ರೆಬಲ್ ನಾಯಕತ್ವ ನಾನು ವಹಿಸೋದಿಲ್ಲ. ಮೆಗಾಸಿಟಿ ಹಗರಣದ ಬಗ್ಗೆಯಷ್ಟೇ ಬಿಜೆಪಿ ಹೈಕಮಾಂಡ್ ಗೆ ದೂರು ನೀಡಿದ್ದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಪಿ ಯೋಗೀಶ್ವರ್ ಯಾರು ಅಂತ ಗೊತ್ತಿಲ್ಲ. ಚುನಾವಣೆಗೆ ನಿಲ್ಲದವರನ್ನು ಮಂತ್ರಿ ಮಾಡಲಾಗಿದೆ. ನಾನೂ ಹೈಕಮಾಂಡ್ ಗೆ ಮೆಗಾಸಿಟಿ ಹಗರಣದ ಬಗ್ಗೆ ದೂರು ನೀಡಿದ್ದೇನೆ. ಅದರ ಹೊರತಾಗಿ ಯಾವುದೇ ದಾಖಲೆ ಬಿಡುಗಡೆ ಮಾಡುವುದಿಲ್ಲ ಎಂದರು.



