ಬೆಂಗಳೂರು: ಇಂದು ಸಂಜೆ 3.50ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 7 ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. 7 ಶಾಸಕರ ಹೆಸರುಗಳನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಆ ಮೂಲಕ ಸಂಪುಟವನ್ನು ಸೇರುವವರು ಯಾರು ಎಂಬ ಕುತೂಹಲವನ್ನು ತಣಿಸಿದ್ದಾರೆ. ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ವಿಧಾನಸೌಧದಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಅವರು ಸಂಪುಟ ಸೇರುತ್ತಿರುವವರ ಹೆಸರುಗಳನ್ನು ಘೋಷಿಸಿದರು.
- ಯಾರಿಗೆ ಸಚಿವ ಸ್ಥಾನ..?
- ಹುಕ್ಕೇರಿ ಶಾಸಕ ಉಮೇಶ್ ಕತ್ತಿ
- ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ
- ಸುಳ್ಯ ಶಾಸಕ ಎಸ್. ಅಂಗಾರ
- ಬೀಳಗಿ ಶಾಸಕ ಮುರುಗೇಶ್ ನಿರಾಣಿ
- ಎಂಎಲ್ಸಿ ಎಂಟಿಬಿ ನಾಗರಾಜ್,
- ಎಂಎಲ್ಸಿ ಆರ್. ಶಂಕರ್,
- ಎಂಎಲ್ಸಿ ಸಿ.ಪಿ. ಯೋಗೇಶ್ವರ್
ಈ ನಾಯಕರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಪ್ರಕಟಿಸಿದ್ದಾರೆ.



