ದಾವಣಗೆರೆ: 2019-20 ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ದಾವಣಗೆರೆ ವಿಭಾಗ ವ್ಯಾಪ್ತಿಗೆ ರೂ. 185.23 ಕೋಟಿ ಅನುದಾನ ಒದಗಿಸಲಾಗಿದ್ದು, ರೂ.158.70 ಕೋಟಿ ಅಂದರೆ ಶೇ.85.60. ಆರ್ಥಿಕ ಪ್ರಗತಿಯಾಗಿರುತ್ತದೆ. ಇದುವರೆಗೆ ರೂ.88.73 ಕೋಟಿ ಅನುದಾನ ಬಿಡುಗಡೆಯಾಗಿದು ರೂ.77.85 ಕೋಟಿ ಅಂದರೆ ಶೇ.87.74 ಆರ್ಥಿಕ ಪ್ರಗತಿಯಾಗಿರುತ್ತದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಯಡಿ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಒಟ್ಟು 384.81 ಕಿ.ಮೀ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ದಿ ಮತ್ತು 12 ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಹರಿಜನ ಮತ್ತು ಗಿರಿಜನ ಕಾಲೋನಿಗಳಲ್ಲಿ ಉತ್ತಮ ಗುಣಮಟ್ಟದ 161.93 ಕಿ.ಮೀ ಕಾಂಕ್ರಿಟ್ ರಸ್ತೆ ಅಭಿವೃದ್ದಿಪಡಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ.35.75 ಕೋಟಿ ಅನುದಾನದಡಿ 110 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಕಾಮಗಾರಿಗಳನ್ನು ಪ್ರಾರಂಭಿಸಬೇಕಾಗಿರುತ್ತದೆ. 2019-20 ನೇ ಸಾಲಿನಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ ರೂ.12.55 ಕೋಟಿ ಅನುದಾನದಡಿ 19.25 ಕಿ.ಮೀ ರಸ್ತೆ ಅಭಿವೃದ್ದಿಪಡಿಸಲಾಗಿರುತ್ತದೆ. 2020-21 ನೇ ಸಾಲಿನಲ್ಲಿ ವಿಶೇಷ ಅಬಿವೃದ್ದಿ ಯೋಜನೆಯಡಿ ರೂ.8.20 ಕೋಟಿ ಅನುದಾನದಡಿ 34 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಕಾಮಗಾರಿಗಳನ್ನು ಪ್ರಾರಂಭಿಸಬೇಕಾಗಿರುತ್ತದೆ.
2020-21 ನೇ ಸಾಲಿನಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ರೂ.13.55 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 15 ಕಾಮಗಾರಿಗಳ ಅನುಷ್ಟಾನ ಕೈಗೊಳ್ಳಲಾಗಿದೆ. ರಾಜ್ಯ ಹೆದ್ದಾರಿ ರಸ್ತೆಗಳ ನಿರ್ವಹಣೆಯಡಿ ಇದುವರೆಗೆ 387.04 ಕಿ.ಮೀ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆಯಡಿ 939.51 ಕಿ.ಮೀ ಗುಂಡಿ ಮುಚ್ಚಲಾಗಿರುತ್ತದೆ.
2019-20 ನೇ ಸಾಲಿನಲ್ಲಿ ಎಸ್ಹೆಚ್ಡಿಪಿ-ಫೇಸ್ 4 ಘಟ್ಟ 1 ರಲ್ಲಿ ರೂ.106.60 ಕೋಟಿ ಮೊತ್ತದಲ್ಲಿ 102.84 ಕಿ.ಮೀ. ರಸ್ತೆಗಳ ಅಭಿವೃದ್ದಿ ಕೈಗೊಂಡಿದ್ದು, 61.69 ಕಿ.ಮೀ ಅಭಿವೃದ್ದಿ ಪೂರ್ಣಗೊಳಿಸಲಾಗಿದೆ. 2020ನೇ ಸಾಲಿನಲ್ಲಿ ಎಸ್ಹೆಚ್ಡಿಪಿ ಫೇಸ್-4, ಘಟ್ಟ-2 ರಲ್ಲಿ ರೂ.155 ಕೋಟಿ ಮೊತ್ತದಲ್ಲಿ 119.70 ಕಿ.ಮೀ ರಸ್ತೆ ನಿರ್ವಹಣಾ ಕಾಮಗಾರಿಗಳ ಪ್ರಸ್ತಾವನೆ ಅನುಮೋದನೆ ನಿರೀಕ್ಷೆಯಲ್ಲಿದೆ.
ಕೆಶಿಪ್-3 ರ ಅಡಿಯಲ್ಲಿ 2020-21 ನೇ ಸಾಲಿನಲ್ಲಿ ಗದಗ-ಹೊನ್ನಾಳಿ ರಸ್ತೆಯ ಹೊನ್ನಾಳಿ ವ್ಯಾಪ್ತಿಯಡಿ 10 ಕಿ.ಮೀ ರಸ್ತೆ ಅಭಿವೃದ್ದಿಯನ್ನು ರೂ. 45 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ. ಕೆಆರ್ಡಿಸಿಎಲ್ ವತಿಯಿಂದ ರೂ.14.58 ಕೋಟಿ ಮೊತ್ತದಲ್ಲಿ 5 ಸೇತುವೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.
ರಸ್ತೆ ಯೋಜನೆ ಮತ್ತು ಆಸ್ತಿ ನಿರ್ವಹಣೆ ಕೇಂದ್ರ(ಪಿಆರ್ಎಎಂಸಿ) ವತಿಯಿಂದ 2018-19ನೇ ಸಾಲಿನಲ್ಲಿ ರೂ.62.75 ಕೋಟಿ ಅನುದಾನದಡಿ 16 ರಸ್ತೆ ಸುರಕ್ಷತೆ ಹಾಗೂ ಕಪ್ಪು ಸ್ಥಳ ನಿವಾರಣೆ ಕಾಮಗಾರಿಗಳ ಅನುಷ್ಠಾನ ಪೂರ್ಣಗೊಳಿಸಲಾಗಿದೆ.
2019-20ನೇ ಸಾಲಿನಲ್ಲಿ ರೂ.22.60ಕೋಟಿ ಅನುದಾನದಡಿ 13 ರಸ್ತೆ ಸುರಕ್ಷತೆ ಹಾಗೂ ಕಪ್ಪು ಸ್ಥಳ ನಿವಾರಣೆ ಕಾಮಗಾರಿಗಳು ಪ್ರಗತಿಯಲ್ಲಿವೆ. ನಬಾರ್ಡ್ ಸಹಯೋಗದಲ್ಲಿ ರೂ.3.60 ಕೋಟಿ ಅನುದಾನದಡಿ 7.50 ಕಿ.ಮೀ ರಸ್ತೆ ಅಭಿವೃದ್ದಿಪಡಿಸಲಾಗಿದೆ. ಹಾಗೂ ರೂ.3.10 ಕೋಟಿ ಅನುದಾನದಡಿ 3 ಸೇತುವೆಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ನಬಾರ್ಡ್ ಸಹಯೋಗದಲ್ಲಿ 38 ಶಾಲಾ ಕಟ್ಟಡ ಕೊಠಡಿ ನಿರ್ಮಾಣ ಹಾಗೂ 07 ಅಂಗನವಾಡಿ ಶಾಲಾ ಕೊಠಡಿಗಳ ನಿರ್ಮಾಣವನ್ನು ರೂ.10.30 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, 9 ಶಾಲಾ ಕೊಠಡಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಮುಕ್ತಾಯ ಹಂತದಲ್ಲಿರುತ್ತದೆ.
ರಸ್ತೆಗಳ ಉನ್ನತಿಕರಣ: 189.00 ಕಿ.ಮೀ ರಾಜ್ಯ ಹೆದ್ದಾರಿ ಮತ್ತು 362.55 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳ ಉನ್ನತೀಕರಣ ಕಾರ್ಯ ಕೈಗೊಳ್ಳಲು ಸರ್ಕಾರ ಆದೇಶಿಸಿದೆ. ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಚನ್ನಗಿರಿ, ದಾವಣಗೆರೆ, ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ಒಟ್ಟು 16 ಕಾಮಗಾರಿಗಳು. ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಜಗಳೂರು, ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ ಸೇರಿ ಒಟ್ಟು 32 ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೃಷ್ಣರೆಡಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪಿಡಬ್ಲ್ಯುಡಿ ಮುಖ್ಯ ಅಭಿಯಂತರ ಕಾಂತರಾಜ್, ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.