ದಾವಣಗೆರೆ : ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿಗೆ ಮುಂಚೆ 31, ಮಾರ್ಚ್ 2020ರ ಅಧಿಕೃತ ಮಾರಟಗಾರರಿಂದ ಮಾರಾಟವಾಗಿ, ತಾತ್ಕಾಲಿಕ ನೋದಣಿಯನ್ನು ಹೊಂದಿ, ಇ-ವಾಹನ್ ಪೋರ್ಟ್ನಲ್ಲಿ ನಮೂದಿತವಾಗಿ ನೋಂದಣಿಯಾಗದೆ ಉಳಿದಿರಿರುವ ಭಾರತ್ ಸ್ಟೇಜ್-4 ಮಾಪನದ ಎಲ್ಲಾ ವಾಹನಗಳನ್ನು ಜ.16 ರವರೆಗೆ ನಿಯಮಾನುಸಾರ ನೋಂದಣಿ ಆರಂಭಗೊಂಡಿದೆ.
ಸರ್ವೊಚ್ಚ ನ್ಯಾಯಲಯದ ಆದೇಶದ ಹಿನ್ನಲೆಯಲ್ಲಿ ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದು ಅದರಂತೆ ಸಾರ್ವಜನಿಕರು ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಜ.16 ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



