ಡಿವಿಜಿಸುದ್ದಿ.ಕಾಂ, ಚನ್ನಗಿರಿ: ತಾಲ್ಲೂಕಿನ ಮಾವೀನಕಟ್ಟೆ ಮತ್ತು ಮಾಡಾಳ್ ಗ್ರಾಮದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡಿದ್ದ ಮೂರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.5 ಲಕ್ಷ ಬೆಲೆಬಾಳುವ 79 ಕೆ.ಜಿ ಶ್ರೀಗಂಧದ ಮರ ವಶಪಡಿಸಿಕೊಳ್ಳಲಾಗಿದ್ದು, ಇನ್ನು ನಾಲ್ವರು ಕಳ್ಳರು ತಪ್ಪಿಸಿಕೊಂಡು ಹೋಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ವಾಹನಗಳಿಗೆ ಅಡ್ಡಗಟ್ಟಿ ದರೋಡೆ ನಡೆಯುತ್ತಿದೆ ಎಂಬ ದೂರಿನ ಅನ್ವಯ ಸಿಪಿಐ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿದಾಗ, ದರೋಡೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಯಿತು. ಪಿಳ್ಳಂಗಿರಿ ಗ್ರಾಮದ ಚಿಕ್ಕಪ್ಪ (40), ರಾಜಗೊಂಡನಹಳ್ಳಿಯ ತಿಮ್ಮಪ್ಪ (47), ಎರೆಹಳ್ಳಿ ಗ್ರಾಮದ ಮಂಜಪ್ಪ (41) ಎಂಬುವರನ್ನು ಬಂಧಿತರಾಗಿದ್ದಾರೆ.

ಒಟ್ಟು 7 ಜನ ದರೋಡೆಕೋರರಲ್ಲಿ ಮೂವರು ಮಾತ್ರ ಸಿಕ್ಕಿದ್ದು, ಇನ್ನು ನಾಲ್ವರು ತಪ್ಪಿಸಿಕೊಂಡಿದ್ದಾರೆ. ಕಳತನಕ್ಕೆ ಬಂಧಿತರಿಂದ 3 ಬೈಕ್, ಚಾಕು, ಕಾರದಪುಡಿ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ತೀವ್ರವಾಗಿ ವಿಚಾರಣೆ ಮಾಡಿದ್ದಾಗ ಮಾವೀನಕಟ್ಟೆ ಮತ್ತು ಮಾಡಾಳ್ ಗ್ರಾಮದಲ್ಲಿ ಗಂಧ ಮರ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಕಳ್ಳತನ ಮಾಡಿದ್ದ 5.5 ಬೆಲೆಬಾಳುವ 79 ಕೆ.ಜಿ ಗಂಧದ ಮರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾದಿಕಾರಿ ಹನುಮಂತರಾಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಪ್ರಕರಣ ಭೇದಿಸುವಲ್ಲಿ ಚನ್ನಗಿರಿ ವೃತ್ತ ನಿರೀಕ್ಷಕರಾದ ಆರ್.ಆರ್. ಪಾಟೀಲ್, ಪಿಎಸ್.ಐ ಶಿವರುದ್ರಪ್ಪ ಎಸ್ ಮೇಟಿ, ಎ.ಎಸ್ .ಐ. ವೀರಣ್ಣ, ಸಿಬ್ಬಂದಿಗಳಾದ ಪ್ರಸಾದ್, ಎಸ್.ಆರ್. ರುದ್ರೇಶ್, ಎಂ. ರುದ್ರೇಶ್,ಧರ್ಮಪ್ಪ, ಮಂಜುನಾಥ್, ಪ್ರವೀಣ ಗೌಡ, ರವೀಂದ್ರ, ರಂಗಸ್ವಾಮಿ, ರೇವಣಸಿದ್ಧಪ್ಪ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



