ಮೈಸೂರು: ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಂ ತಿಂದು ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದ ಎರಡೂವರೆ ವರ್ಷದ ಮಗು ಮೃತಪಟ್ಟಿದೆ.
ಗ್ರಾಮದ ಮಹೇಶ್-ಕನ್ಯಾ ದಂಪತಿಯ ಪುತ್ರ ಮನ್ವಿಷ್ ಮೃತಪಟ್ಟ ಮಗುವಾಗಿದೆ. ಮನೆಯಲ್ಲಿ ಆಟವಾಡುತ್ತಿದ್ದಾಗ ಮುಖಕ್ಕೆ ಹಚ್ಚುವ ಕ್ರೀಂ ತಿಂದಿದ್ದಾನೆ. ಇದು ಪೋಷಕರ ಗಮನಕ್ಕೆ ಬಂದಿಲ್ಲ. ರಾತ್ರಿ 10 ಗಂಟೆ ಸಮಯದಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ಮಗುವನ್ನು ತಕ್ಷಣವೇ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಶ್ನಿಸಿದಾಗ ಪರಿಶೀಲನೆ ನಡೆಸಿದಾಗ ಫೇಸ್ ಕ್ರೀಂ ತಿಂದಿರುವುದು ಗೊತ್ತಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಮಗು ಮೃತಪಟಿದೆ.