ದಾವಣಗೆರೆ: ಉಜಿರೆಯಲ್ಲಿ ಎಸ್.ಡಿ.ಪಿ.ಐ(SDPI) ಕಾರ್ಯಕರ್ತರು ಪಾಕಿಸ್ತಾನ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಜಿಲ್ಲಾಧಿಕಾರಿ ಮುಖಾಂತರ ಗೃಹ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ದೇಶದ್ರೋಹ ಹೇಳಿಕೆ ನೀಡಿರುವ ಎಸ್.ಡಿ.ಪಿ.ಐ ನಿಷೇಧಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮನವಿ ಮಾಡಿದರು. ಶಾಂತಿಯುತವಾಗಿರುವ ಕರ್ನಾಟಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಟುವಾಗಿ ಖಂಡಿಸುತ್ತದೆ.
30 ಡಿಸೆಂಬರ್, 2020 ಬುಧವಾರ ದಂದು ಉಜಿರೆಯ ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ವಿಜಯೋತ್ಸವದ ನೆಪದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಇಂತಹ ದೇಶದ್ರೋಹದ ಕೆಲಸ ಮಾಡಿದ್ದಕ್ಕಾಗಿ ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಇಂತಹ ದೇಶವಿರೋಧಿ ಘಟನೆಗಳು ನಡೆಯುತ್ತಲೇ ಇವೆ. ಇಂತಹ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದರೆ ಇದರಲ್ಲಿ ಪೊಲೀಸ್ ಮತ್ತು ಸರಕಾರದ ವಿಫಲತೆಯೂ ಕೂಡ ಎದ್ದು ಕಾಣುತ್ತಿದೆ.
ಶಾಂತಿಯುತವಾದ ರಾಜ್ಯದಲ್ಲಿ ಇದನ್ನು ಸಹಿಸದ ಕೆಲ ಸಮಾಜಘಾತಕ ಶಕ್ತಿಗಳು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಘಾತುಕ ಕೃತ್ಯ ಎಸಗಿದ್ದಾರೆ.ಈ ಘಟನೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯದ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು. ಎಲ್ಲರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಯಾವುದೇ ಪಕ್ಷಗಳು ವೋಟ್ ಬ್ಯಾಂಕ್ ಗಾಗಿ ಮೃದುಧೋರಣೆ ತೋರಿ ತನಿಖೆಯನ್ನು ಹತ್ತಿಕ್ಕಲು ಪ್ರಯತ್ನಿಸಬಾರದು , ಸರಕಾರ ಎಚ್ಚರಿಕೆಯಿಂದ ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳುಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶರತ್, ಮಹಾನಗರ ಕಾರ್ಯದರ್ಶಿ ಭಾರ್ಗವ್, ಹಾಸ್ಟೆಲ್ ಪ್ರಮುಖ್ ರವಿ ,ನಗರ ಸಾಮಾಜಿಕ ಜಾಲತಾಣ ಪ್ರಮುಖ್ ನಿತಿನ್ ,ನಗರ ಹೋರಾಟ ಪ್ರಮುಖ್ ವಿಜಯ್,ನಗರ ವಿದ್ಯಾರ್ಥಿನಿ ಪ್ರಮುಖ್ ಮಾನಸ ,ಕಾರ್ಯಕರ್ತರಾದ ಸುಮನ್ ಮತ್ತು ಇತರರಿದ್ದರು.