ಡಿವಿಜಿಸುದ್ದಿ.ಕಾಂ,ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿಗಳ ಮೇಲೆ ಧಿಡೀರ್ ದಾಳಿ ನಡೆಸಿ ಕೀಟನಾಶಕಗಳನ್ನು ಪರಿಶೀಲನೆ ನಡೆಸಿದರು.
ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ನೇತೃತ್ವದ ತಂಡ ಗ್ರಾಮದ ಪಾಟೀಲ್ ಆಗ್ರೋ ಏಜೆನ್ಸಿಸ್, ವೀರಭದ್ರೇಶ್ವರ ಆಗ್ರೋ ಕೇಂದ್ರಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಅರಸೀಕೆರೆ ರೈತ ಸಂಪರ್ಕ ಅಧಿಕಾರಿ ರಾಮನಗೌಡ ಮಾತನಾಡಿ ,ಮಳಿಗೆಗಳಲ್ಲಿ ಅನಾಧಿಕೃತ ಕಂಪನಿಗಳ ಕೀಟನಾಶಕ ಮಾರಾಟ ಮಾಡಬಾರದು. ಮಾರಾಟ ಮಾಡುವುದು ಕಂಡುಬಂದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.ರೈತರಿಗೆ ನೀಡುವ ಪ್ರತಿ ವಸ್ತುವಿನ ನಿಗದಿತ ಬೆಲೆ ನಮೂದಿಸಿ ರೈತರ ಸಹಿ ಪಡೆದುಕೊಳ್ಳಬೇಕು. ಉತ್ತಮ ಗುಣ ಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಿ ರೈತರ ಏಳಿಗೆಗೆ ಸಹಕರಿಸಬೇಕು ಎಂದು.



