ಡಿವಿಜಿಸುದ್ದಿ.ಕಾಂ, ದಾವಣಗೆರೆ: ಜೀವನದಲ್ಲಿ ಒಮ್ಮೆಯಾದರೂ ಇಸ್ಲಂ ಪವಿತ್ರ ಕ್ಷೇತ್ರ ಹಜ್ ಯಾತ್ರೆ ಕೈಗೊಳ್ಳಬೇಕು ಅನ್ನೋ ಆಸೆ ಮುಸ್ಲಿಂ ಬಾಂಧವದರಿಗೆ ಇರುತ್ತೆ.. ಶ್ರೀಮಂತರ ಅರಾಮವಾಗಿ ಯಾತ್ರೆ ಕೈಗೊಳ್ಳುತ್ತಾರೆ. ಆದ್ರೆ, ಬಡವರು ಕೂಲಿನಾಲಿ ಮಾಡಿ ಹಣ ಜೋಡಿಸಿರುತ್ತಾರೆ. ಯಾತ್ರೆಗೆಂದು ಹಣ ಕಟ್ಟಿಸಿಕೊಂಡ ವ್ಯಕ್ತಿಯೊಬ್ಬ ಬಡವರಿಗೆ ವಂಚಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಅವರೆಲ್ಲ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಜನ, ಕಷ್ಟಪಟ್ಟ ಹಣ ಕೂಡಿಟ್ಟು ಪವಿತ್ರ ಹಜ್ ಯಾತ್ರೆಗೆ ಹೋಗಬೇಕು ಎನ್ನುವ ಕನಸು ಕಂಡವರು. ಇನ್ನೇನು ಎರಡು ದಿನಗಳಲ್ಲಿ ಹಜ್ ಯಾತ್ರೆ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಂಡು ಕಾತುರದಿಂದ ಕಾಯುತ್ತಾ ಕುಳಿತಿದ್ದರು.ಆದರೆ, ಖತರನಾಕ್ ವ್ಯಕ್ತಿಯೊಬ್ಬ ಈ ಬಡವರಿಗೆ ವಂಚಿಸಿದ್ದಾನೆ.
ದಾವಣಗೆರೆಯ ಮದೀನಾ ಸರ್ಕಲ್ ನಲ್ಲಿರುವ ಐಮಾನ್ ಅಸೋಸಿಯೇಟ್ ಎನ್ನುವ ಟ್ರಾವೆಲ್ ಏಜೆನ್ಸಿಯಲ್ಲಿ ಸೈಯದ್ ಸಾಧಿಕ್ ಈತ ಐಮಾನ್ ಆಸೋಸಿಯೇಟ್ ನಲ್ಲಿ ಟ್ರಾವಲಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ದಾವಣಗೆರೆಯಿಂದ ಇದೇ ೧೩ ರಂದು 15 ದಿನಗಳ ಕಾಲ ಹಜ್ ಯಾತ್ರೆಗೆಂದು 120 ಕ್ಕೂ ಹೆಚ್ವು ಜನರಿಂದ 60 ಸಾವಿರದಂತೆ ಹಣ ಪಡೆದಿದ್ದಾನೆ. ನಂತರ ಸೌದಿ ಅರೇಬಿಯಾ ದ ಸರ್ಕಾರ ಟ್ಯಾಕ್ಸ್ ಜಾಸ್ತಿ ಮಾಡಿದೆ ಎಂದು ಹೇಳಿ ಮತ್ತೆ 12 ಸಾವಿರ ವಸೂಲಿಮಾಡಿದ್ದಲ್ಲದೆ ಪಾಸ್ ಪೋರ್ಟ್ ಅನ್ನು ಸಹ ತನ್ನ ಬಳಿ ತೆಗೆದುಕೊಂಡಿದ್ದಾನೆ.. ಇನ್ನೇನು ಹಜ್ ಯಾತ್ರೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಟ್ರಾವೆಲ್ಸ್ ಏಜೆನ್ಸಿಯ ಕಚೇರಿ ಖಾಲಿ ಮಾಡಿಕೊಂಡು ಬೀಗ ಹಾಕಿಕೊಂಡು ಪರಾರಿಯಾಗಿದ್ದನೆ.
ಸೈಯದ್ ಸಾಧಿಕ್ ಬೆಂಗಳೂರಿನಲ್ಲಿ ಸಭೆ ಮಾಡಿ ನಂಬಿಸಿದ್ದ. ಸಭೆಯಲ್ಲಿ ಹೇಳಿದ ಮಾತುಗಳನ್ನು ಕೇಳಿ ಹಜ್ ಯಾತ್ರೆ ಕಡಿಮೆ ಖರ್ಚಿನಲ್ಲಿ ಆಗುತ್ತೆ ಎಂದು ದುಡಿದು ಕೂಡಿಸಿಟ್ಟ ಹಣವನ್ನು ಸೈಯದ್ ಸಾಧಿಕ್ ನ ಕೈ ಗೆ ಕೊಟ್ಟಿದ್ದರು. ಆದ್ರೆ ಈಗ ಇತ್ತ ಹಜ್ ಯಾತ್ರೆ ಇಲ್ಲ ತಾವು ದುಡಿದು ಕೂಡಿಸಿಟ್ಟ ಹಣ ಕೂಡ ಇಲ್ಲ ಎಂದು ವೃದ್ದರೂ ಗೋಳಾಡುತ್ತಿದ್ದಾರೆ..
ಇನ್ನು ಮೋಸ ಹೋದವರು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಒಟ್ಟಾರೆಯಾಗಿ ಪವಿತ್ರ ಹಜ್ ಯಾತ್ರೆಯ ಹೆಸರಲ್ಲಿ ಈ ರೀತಿ ನೂರಾರು ಜನರಿಗೆ ಮೋಸ ಮಾಡಿದ್ದಲ್ಲದೆ, ಬಡವರು ಕೂಡಿಟ್ಟ ಹಣವನ್ನು ಕೊಳ್ಳೆ ಹೊಡೆದಿದ್ದಾನೆ.



