ಚಂಡೀಗಢ: ಕೊರೊನಾ ಲಸಿಕೆ ಕೋವಾಕ್ಸಿನ್ ಪ್ರಾಯೋಗಿವಾಗಿ ಪಡೆದುಕೊಂಡಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ನವೆಂಬರ್ 20ರಂದು ವಿಜ್ ಅವರು ಕರೊನಾ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು. ಈ ಟ್ವೀಟ್ ಮೂಲಕ ಕೋವಿಡ್ ಪಾಸಿಟಿವ್ ಆಗಿರುವುದನ್ನು ವಿಜ್ ಅವರು ಖಚಿತಪಡಿಸಿದ್ದಾರೆ.
ತಮ್ಮ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ನವೆಂಬರ್ 20ರಂದು ಕೋವಾಕ್ಸಿನ್ ಹೆಸರಿನ ಕೋವಿಡ್ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು. ಇದಕ್ಕೂ ಮುನ್ನ ವಿಜ್ ಅವರು ಸಂಭವನೀಯ ಕರೊನಾ ಲಸಿಕೆ ಕೋವಾಕ್ಸಿನ್ನ ಮೂರನೇ ಹಂತದ ಪ್ರಯೋಗದ ಮೊದಲ ಪ್ರಯೋಗಕ್ಕೆ ಒಳಗಾಗಿದ್ದರು.
ಕೊರೊನಾ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂದು ಹೇಳಲಾಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪನಿಯೂ ಅಭಿವೃದ್ಧಿ ಪಡಿಸುತ್ತಿದೆ.ಕೋವಾಕ್ಸಿನ್ ಲಸಿಕೆ ಮೂರನೇ ಹಂತ ಪ್ರಯೋಗದಲ್ಲಿದೆ.



