ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ.ಎಸ್. ಪರಮಶಿವಯ್ಯ ಅವರನ್ನು ನೇಮಿಸಿದ್ದ ಸರ್ಕಾರ, ಇದೀಗ ನೂತನ 10 ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಿದೆ.
ಶಾಸಕರಾದ ವೀರಣ್ಣ ಚರಂತಿಮಠ, ಶಂಕರ್ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಹಾಲಪ್ಪ ಆಚಾರ್, ಕೆಎಲ್ ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಯು.ಬಿ. ಬಣಕಾರ, ಹೊಸದುರ್ಗದ ಲಿಮಗಮೂರ್ತಿ, ಮಹಾಂತೇಶ್ ಪಾಟೀಲ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರನ್ನು ನೇಮಿಸಲಾಗಿದೆ.



