ನವದೆಹಲಿ: 50 ಸಾವಿರ ದಾಟಿದ್ದ ಚಿನ್ನ ಇಳಿಕೆಯಾಗಿದೆ. ಮೂರು ತಿಂಗಳ ಬಳಿಕ ಈಗ ಚಿನ್ನದ ದರ ಭಾರೀ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 48 ಸಾವಿರ ರೂಪಾಯಿಗೆ ಇಳಿಕೆಯಾಗಿದೆ. ಚಿನ್ನ ಖರೀದಿಸುವರಿಗೆ ಇದು ಒಳ್ಳೆ ಸಮಯವಾಗಿದೆ.
ಚಿನಿವಾರು ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 48,513 ರೂಪಾಯಿ ವರದಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಚಿನ್ನದ ದರ ಶೇ. 4 ಇಳಿಕೆ ಕಂಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇ. 2.5 ಇಳಿಕೆಯಾಗಿದೆ. ಈ ವರ್ಷದ ಆಗಸ್ಟ್ 7ರಂದ ಚಿನ್ನದ ದರ 56 ಸಾವಿರಕ್ಕೂ ಅಧಿಕ ವರದಿಯಾಗಿತ್ತು. ಆಗಸ್ಟ್ 25ಕ್ಕೆ 48,500ಕ್ಕೆ ಇಳಿಕೆಯಾಗಿತ್ತು. ಇದೀಗ 3 ತಿಂಗಳ ನಂತರ ಅತ್ಯಂತ ಕಡಿಮೆ ಚಿನ್ನದ ದರ ವರದಿಯಾಗಿದೆ.
ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 44,824 ವರದಿಯಾಗಿದ್ದು, 44,705ಕ್ಕೆ ಇಳಿದಿದೆ. 24 ಕ್ಯಾರೆಟ್ ಗೋಲ್ಡ್ನಲ್ಲೂ 130 ರೂಪಾಯಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಚಿನ್ನದ ದರ 46,200 ರೂಪಾಯಿಗಳಷ್ಟಿದೆ. ಉಳಿದಂತೆ ಚೆನ್ನೈನಲ್ಲಿ 46,400, ಕೋಲ್ಕತದಲ್ಲಿ 50,070 ಮತ್ತು ಮುಂಬೈನಲ್ಲಿ 49,800 ವರದಿಯಾಗಿದೆ. ಒಂದು ಕೆ.ಜಿ ಬೆಳ್ಳಿ ದರ 60,050 ರೂಪಾಯಿ ಇದೆ.



