
ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ದಿಗ್ಗೆನಹಳ್ಳಿ ಗ್ರಾಮದ ಎ.ಕೆ ಹಾಲಮ್ಮ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಮಾವಿನಹೊಳೆಯಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶಿವಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿಗ್ಗೆನಹಳ್ಳಿ ನಾಗರಾಜ್ ,ಉಪಾಧ್ಯಕ್ಷೆ ಯಶೋಧಮ್ಮ ಹನುಮಂತಪ್ಪ,ಸದಸ್ಯರುಗಳಾದ ಎಚ್. ಎನ್. ಮೂರ್ತಿ, ಶೈಲಾರಾಣಿ ಬಸವರಾಜ, ಷಣ್ಮುಖಪ್ಪ,ಪ್ರಕಾಶ್, ಗಿರಿಜಮ್ಮ,ಸಿದ್ದಗಂಗಮ್ಮ ಕಾಟಪ್ಪ, ಸುರೇಶ್,ನಾಗರಾಜ್ ಪಿರಿಯ ನಾಯ್ಕ್,ಮಾಲಾ ಮಲ್ಲಿಕಾರ್ಜುನ್,ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.



