ಬಿಹಾರ: ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಸಿನ್ಹಾ 126 ಮತಗಳನ್ನ ಪಡೆದಿದ್ರೆ, ವಿರೋಧ ಪಕ್ಷ ಮಹಾಮೈತ್ರಿ ಕೂಟದಿಂದ ಸ್ಪರ್ಧಿಸಿದ್ದ ಆರ್ ಜೆಡಿಎಸ್ ಅವಧ್ ಬಿಹಾರಿ ಚೌಧರಿ ಅವರ ಪರವಾಗಿ 114 ಮತಗಳು ಚಲಾವಣೆಯಾಗಿದ್ದವು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಎಂಬ ಕಾರಣಕ್ಕೆ ಸದನದಲ್ಲಿ ಹಾಜರಿರದ ವಿರೋಧ ಪಕ್ಷದ ಸದಸ್ಯರು ಸದನದ ಕಲಾಪವನ್ನ ತೀವ್ರ ವಿರೋಧಿಸಿದರು. ಆದರೆ, ಮುಖ್ಯಮಂತ್ರಿಯ ಉಪಸ್ಥಿತಿ ನ್ಯಾಯಸಮ್ಮತವಾಗಿದೆ ಎಂದು ಪೀಠವು ಆಕ್ಷೇಪವನ್ನ ತಳ್ಳಿಹಾಕಿತು. ನಂತ್ರ ಸ್ಪೀಕರ್ ಧ್ವನಿ ಮತದ ಮೂಲಕ ಮತ ಚಲಾಯಿಸುವಂತೆ ತಿಳಿಸಿದ್ರು . ಆದ್ರೆ, ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ರಹಸ್ಯ ಮತದಾನದ ಮೂಲಕ ಮತ ಪ್ರಕ್ರಿಯೆ ನಡೆಯಿತು. ಅದರಂತೆ ಬಿಹಾರ ವಿಧಾನಸಭೆಗೆ ನೂತನ ಸ್ಪೀಕರ್ ಆಗಿ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಆಯ್ಕೆಯಾಗಿದ್ದಾರೆ.