ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನು ಇಲ್ಲ. ಈ ರೀತಿ ಕೇಳುವುದರಲ್ಲಿ ನಾನು ಕೂಡ ಒಬ್ಬ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಆಕಾಂಕ್ಷಿಗಳು ರಮೇಶ್ ಜಾರಕಿಹೊಳಿಯನ್ನು ಭೇಟಿಯಾಗುತ್ತಿರುವುದು ಇಲಾಖೆ ಅನುದಾನ ಪಡೆಯಲು. ರಮೇಶ್ ಜಾರಕಿಹೊಳಿ ಅವರು ಪರ್ಯಾಯ ನಾಯಕರೇನಲ್ಲ. ಸಚಿವರನ್ನು ಭೇಟಿಯಾಗುವ ರೀತಿಯಲ್ಲಿ ಅವರನ್ನ ಕೂಡ ಭೇಟಿಯಾಗಿದ್ದಾರೆ. ನನ್ನನ್ನು ಕೆಲವು ಶಾಸಕರು ಭೇಟಿಯಾಗುತ್ತಾರೆ ಅದೇ ರೀತಿ ಅವರನ್ನು ಭೇಟಿಯಾಗಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಇನ್ನು ಅಷ್ಟು ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆ ನಂತರ ಮಸೂದೆ ಮಂಡನೆಯಾಗುತ್ತದೆ. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಗೆ ಸಂಬಂಧಿಸಿ ಸಿಎಂ ಪರಮಾಧಿಕಾರವಿದೆ. ಹೈಕಮಾಂಡ್ ಸೂಚನೆಯಂತೆ ಸಿಎಂ ನಡೆದುಕೊಳ್ತಾರೆ ಎಂದರು ತಿಳಿಸಿದರು.